2019 ಫೆಬ್ರವರಿ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ : ಡಾ| ಹೆಗ್ಗಡೆ ಘೋಷಣೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ : ಲೋಕ ಕಲ್ಯಾಣಾರ್ಥ ವಾಗಿ 2019 ರ ಫೆಬ್ರವರಿಯಲ್ಲಿ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿಗೆ ಮಹಾಮಜ್ಜನ ನಡೆಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಸೆ.10 ರಂದು ಕ್ಷೇತ್ರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
1989 ರಲ್ಲಿ ಪ್ರತಿಷ್ಠಾಪನೆಗೊಂಡ ಬಾಹುಬಲಿ ಮೂರ್ತಿಗೆ ಮೊದಲ ಮಸ್ತಕಾಭಿಷೇಕ ನಡೆದಿತ್ತು. ಬಳಿಕ 1994, 2007 ರಲ್ಲಿ 3 ಬಾರಿ ಮಸ್ತಕಾಭಿಷೇಕ ಕೈಗೊಳ್ಳಲಾಗಿತ್ತು. 12 ವರ್ಷಗಳ ನಂತರ ಇದೀಗ 2019 ರಲ್ಲಿ 4ನೇ ಬಾರಿಗೆ ತ್ಯಾಗಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಸಲಾಗುವುದು. ಈ ಬಾರಿಯ ಧಾರ್ಮಿಕ ಕಾರ್ಯಕ್ರಮಕ್ಕೆ ದಿಗಂಬರ ಮುನಿಗಳಾದ ವರ್ಧಮಾನ ಸಾಗರಜೀ ಮುನಿಮಹಾರಾಜ್, ಪುಷ್ಪದಂತ ಸಾಗರ್‌ಜಿ ಮುನಿಮಹಾರಾಜ್ ನೇತೃತ್ವ ನೀಡಲಿದ್ದು ಹದಿನೈದು ಮಂದಿ ದಿಗಂಬರ ಮುನಿಗಳು ಸಾನಿಧ್ಯ ವಹಿಸಲಿದ್ದಾರೆ. 600 ಕಿ.ಮೀ ವ್ಯಾಪ್ತಿಯ ಚಾತುರ್ಮಾಸ್ಯ ಆಚರಿಸುತ್ತಿರುವ ಇನ್ನೂ ಅನೇಕ ಮಂದಿ ಮುನಿಗಳು, ಭಟ್ಟಾರಕರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದರು.
ಬದುಕು ಮತ್ತು ಬದುಕಲು ಬಿಡು ಸಂದೇಶ :
ಜೀನೇ ಔರ್ ಜೀನೇ ದೋ (ಬದುಕು ಮತ್ತು ಬದುಕಲು ಬಿಡು) ಎಂಬ ಧ್ಯೆಯ ವಾಕ್ಯದಡಿ ಲೋಕಕಲ್ಯಾಣಾರ್ಥವಾಗಿ ಈ ಬಾರಿಯ ಮಹಾಮಸ್ತಕಾಭಿಷೇಕ ನಡೆಯಲಿದೆ. ಸುಮಾರು 8 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟೇ ದಿನಾಂಕ ನಿರ್ಧಾರವಾಗಬೇಕಾಗಿದೆ ಎಂದ ಹೆಗ್ಗಡೆಯವರು, 1982 ರಲ್ಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯ ಅಂಗನವಾಗಿ ಜನ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ ರುಡ್‌ಸೆಟ್ ಪ್ರಾರಂಭಿಸಲಾಗಿತ್ತು ಎಂದು ನೆನಪಿಸಿಕೊಂಡರು.
ಮೈತ್ರಿಯಿಂದ ಪ್ರಗತಿ :
ಇಂದು ಲೌಖಿಕ ಸುಖಃ ಭೋಗ, ಸಂಪತ್ತು ಸಾಕಷ್ಟು ಹೆಚ್ಚಾಗಿದ್ದು ಮಾನವೀಯತೆಯ ಕೊರತೆ ಹಿಂಸಾ ಭಾವನೆ ಜಾಸ್ತಿಯಾಗಿದೆ. ದಯೆ, ಪ್ರೀತಿ, ಅನುಕಂಪ, ಸ್ನೇಹಪರತೆ ಉದ್ದೀಪನಗೊಳ್ಳಬೇಕಾಗಿದ್ದು, ಭೇದ ಭಿನ್ನತೆ ಮರೆತು ಎಲ್ಲರಿಗೂ ಸಮಾನ ಅವಕಾಶ ಆಗಬೇಕು ಎಂಬುದೇ ಈ ಮಹಾಮಜ್ಜನದ
ಹಿಂದಿರುವ ಉದ್ಧೇಶ. ಅದು ಭಗವಾನ ಬಾಹುಬಲಿಯ ಜೀವನ ಸಂದೇಶಕೂಡ ಆಗಿತ್ತು. ಅದು ಇಂದು ಸಾರ್ವಕಾಲಿಕ ಮೌಲ್ಯ ಕೂಡ ಆಗಿದೆ ಎಂದರು.
ಕರ್ನಾಟಕ ರಾಜ್ಯಮಟ್ಟದ ಸಮಿತಿ ರಚನೆ :
ಮಹಾಮಸ್ತಕಾಭಿಷೇಕದ ಯಶಸ್ಸಿಗೆ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಡಿ. ಸುರೇಂದ್ರ ಕುಮಾರ್ ಪ್ರಧಾನ ಸಂಚಾಲಕರಾಗಿ, ಡಿ ಹರ್ಷೇಂದ್ರ ಕುಮಾರ್ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಹಾವೀರ ಅಜ್ರಿ ಹಾಗೂ ವೀರೂ ಶೆಟ್ಟಿ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಡಾ| ಹೆಗ್ಗಡೆ ಅವರು ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.