ನಾಲ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಧೇನು ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಕರ್ನಾಟಕ ರಾಜ್ಯದಲ್ಲೆ ದ.ಕ. ಹಾಲು ಒಕ್ಕೂಟ ಅತೀ ಹೆಚ್ಚು ಸಾಧನೆ ಮಾಡಿದೆ. ಕೆ.ಎಂ.ಎಫ್‌ನ ಘಟಕವನ್ನು ಬೆಳ್ತಂಗಡಿಯಲ್ಲಿ ಪ್ರಾರಂಭಿಸಿದರೆ ಅದಕ್ಕೆ ಬೇಕಾಗುವ ಪೂರಕ ಸಹಕಾರ ನೀಡಲು ಬದ್ಧ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೆ.12 ರಂದು ನಾಲ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಧೇನು ಇದರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಹಾಲು ಉತ್ಪಾದನೆಯಲ್ಲಿ ದೇಶಿಯ ಸ್ಥಳೀಯ ಹಾಲನ್ನು ಪ್ರತ್ಯೇಕ ಮಾಡುವುದರ ಮೂಲಕ ದೇಶಿಯ ತಳಿಗಳನ್ನು ಸಾಕುವ ಅಭ್ಯಾಸ ಬೆಳೆಸಬೇಕು. ಮುದ್ರ ಯೋಜನೆ ಮತ್ತು ನಬಾರ್ಡ್ ಯೋಜನೆಯ ಮೂಲಕ ಸಾಲ ನೀಡುತ್ತಿದೆ. ಇದನ್ನು ಪಡೆದುಕೊಂಡು ಹೈನುಗಾರಿಕೆ ಮೂಲಕ ಯುವಕರು ಉದ್ಯೋಗ ಕಲ್ಪಿಸಿಕೊಳ್ಳಬೇಕು ಎಂದರು.
ನೂತನ ಕಟ್ಟಡವನ್ನು ಉದ್ಘಾಟಿಸಿದ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡುತ್ತಾ ಉಡುಪಿ ಮತ್ತು ದ.ಕ. ಜಿಲ್ಲೆಯನ್ನೊಳಗೊಂಡ ಒಟ್ಟು 714 ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ೪೨೬ ಸಂಘಗಳು ಸ್ವಂತ ಕಟ್ಟಡ ಹೊಂದಿದೆ. ಸಂಘಗಳಿಗೆ ಪ್ರಾರಂಭದಲ್ಲಿ ಹಲವಾರು ಸವಾಲುಗಳು ಇರುತ್ತದೆ. ಪರಿಶ್ರಮದಿಂದ ಮುನ್ನಡೆದರೆ ಯಶಸ್ವಿ ಸಾಧ್ಯ. ಹಳ್ಳಿಗಳು ಹಳ್ಳಿಯಾಗಿ ಉಳಿಯಲು ಹೈನುಗಾರಿಕೆ ಮತ್ತು ಕೃಷಿಯಿಂದ ಸಾಧ್ಯ ದ.ಕ. ಜಿಲ್ಲೆಯು ರಾಜ್ಯದಲ್ಲೆ ಗುಣಮಟ್ಟದ ಹಾಲು ಒದಗಿಸುವ ಮೂಲಕ ಹೆಚ್ಚಿನ ದರ ಪಡೆದು ಲಾಭದಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮೀಣ ಪ್ರದೇಶದ ಈ ಸಂಘವು ರೂ. ೧೩.೫ ಲಕ್ಷದ ಕಟ್ಟಡದ ನಿರ್ಮಾಣ ಮಾಡಿದೆ ಎಂದರು.
ದ.ಕ. ಹಾಲು ಒಕ್ಕೂಟದ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ, ಶ್ರೀಮತಿ ವೀಣಾ ರೈ, ನಾರಾಯಣ ಪ್ರಕಾಶ್, ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ಶ್ರೀಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಕೆ. ವಸಂತ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಪುತ್ತೂರು ವಿಭಾಗದ ಉಪ ವ್ಯವಸ್ಥಾಪಕ ಡಾ| ಎಂ. ರಾಮಕೃಷ್ಣ ಭಟ್, ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದೇವಕಿ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಗೌರವ ಉಪಸ್ಥಿತರಿದ್ದರು. ದ.ಕ. ಹಾಲು ಒಕ್ಕೂಟದ ನಿರ್ದೇಶಕ ಬಿ. ನಿರಂಜನ್, ತಾ.ಪಂ. ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿರ್ದೇಶಕರುಗಳಾದ ಅನಿಲ್ ಭಟ್, ನಾಣ್ಯಪ್ಪ ಪೂಜಾರಿ, ಸೇಸಪ್ಪ ಪೂಜಾರಿ, ವಿಠಲ, ಸಂಜೀವ ಶೆಟ್ಟಿ, ಸ್ಟೇನಿ ಲೋಬೊ, ಮೇಕ್ಸಿಂ ಕ್ರಾಸ್ತ, ಮಥಾಯಿಸ್ ಕ್ರಾಸ್ತ, ಶ್ರೀಮತಿ ಸಂದ್ಯಾ ಎಸ್.ಭಟ್, ಶ್ರೀಮತಿ ಶೀಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರತ್ನಾಕರ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮಜಲು ಸ್ವಾಗತಿಸಿ ಸಂಘದ ಸ್ಥಾಪಕ ಅಧ್ಯಕ್ಷ ವಿಶ್ವನಾಥ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಶ್ರೀಮತಿ ವೀಣಾ ವಿ. ಹೊಳ್ಳ ವರದಿ ವಾಚಿಸಿ ಉಪಾಧ್ಯಕ್ಷ ವಿಕ್ಟರ್ ಕ್ರಾಸ್ತ ವಂದಿಸಿದರು. ದ.ಕ. ಹಾಲು ಒಕ್ಕೂಟದ ಬೆಳ್ತಂಗಡಿ ವಿಸ್ತರಣಾಧಿಕಾರಿ ಶ್ರೀಮತಿ ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳು, ತಾಲೂಕಿನ ವಿವಿಧ ಹಾ.ಉ. ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.