ವ್ಯಕ್ತಿತ್ವ ನಿರ್ಮಾಣದಲ್ಲಿ ಜೇಸಿಯ ಪಾತ್ರ ಹಿರಿದು: ವಿಜಯರಾಘವ ಪಡ್ವೆಟ್ನಾಯ

ಉಜಿರೆ: ಪ್ರಸ್ತುತ ಸಮಾಜದ ಕುಂದು ಕೊರತೆಗಳನ್ನು ನೀಗಿಸಿ, ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬಿ ವ್ಯಕ್ತಿತ್ವ ವಿಕಸನ ಮಾಡುವ ಕೆಲಸವನ್ನು ಜೇಸಿ ಉತ್ತಮವಾಗಿ ಮಾಡುತ್ತಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು.ವಿಜಯರಾಘವ ಪಡ್ವೆಟ್ನಾಯ ಅಭಿಪ್ರಾಯಪಟ್ಟರು.
ಅವರು ಉಜಿರೆ ಜೇಸಿಯ ಜೇಸಿ ಸಪ್ತಾಹ-2018-ಸಪ್ತಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಯುವಜನತೆಗೆ ಬೇಕಾದ ಶ್ರದ್ಧೆ ಮತ್ತು ಆತ್ಮವಿಶ್ವಾಸ ತುಂಬುವ ಕಾರ್ಯ ಜೇಸಿಯಿಂದಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಯುವಕರು ಇಂತಹ ಸಂಘಟನೆ ಸೇರಿ ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಲೋಕೋಪಯೋಗಿ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಯುವ ಉದ್ಯಮಿ ಅಶ್ವಥ್ ಹೆಗ್ಡೆ, ಜೆಸಿಐ ಸೆನೆಟರ್ ಪಶುಪತಿ ಶರ್ಮ, ಉಜಿರೆ ಜೇಸಿ ನಿಕಟಪೂರ್ವಾಧ್ಯಕ್ಷ ದೇವುದಾಸ್ ನಾಯಕ್, ಜೆ ಜೇಸಿ ಅಧ್ಯಕ್ಷ ಜಗದೀಶ್, ಜೇಸಿ ಸಪ್ತಾಹ ನಿರ್ದೇಶಕ ವಿಕಾಸ್ ರಾವ್, ಹರೀಶ್ ದೇವಾಡಿಗ ಬಳೆಂಜ, ಉಜಿರೆ ಜೇಸಿಯ ಪೂರ್ವಾಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕು| ಸಿಂಚನಾ, ಎನ್.ಎಸ್ ಭಟ್, ಶ್ರೀಮತಿ ಕರ್ಗಿ ಶೆಡ್ತಿ, ಸಂಜೀವ ಮೂಲ್ಯರವರನ್ನು ಸನ್ಮಾನಿಸಲಾಯಿತು. ದೀಕ್ಷಿತ್ ರೈ ಅತಿಥಿಗಳನ್ನು ವೇದಿಕೆಗೆ ಬರಮಾಡಿದರು. ಮಹೇಶ್ ಶೆಟ್ಟಿ, ಸುರೇಶ್ ಮಾಚಾರ್, ಸಂಪತ್ ಕುಮಾರ್, ನಿಕಿತ್ ಜೈನ್, ನವೀನ್, ಜೆ ಜೇಸಿ ಶ್ರಾವ್ಯ, ಚೆನ್ನವೀರ್, ಪ್ರಸಾದ್ ಕುಮಾರ್, ಮನಮೋಹನ್ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಉಜಿರೆ ಜೇಸಿ ಅಧ್ಯಕ್ಷ ವಿಜೇಂದ್ರ ದೇವಾಡಿಗ ಸ್ವಾಗತಿಸಿ, ಕಾರ್ಯದರ್ಶಿ ಅಭಿಜಿತ್ ಬಡಿಗೇರ ವಂದಿಸಿದರು. ಕಾರ್ಯಕ್ರಮದ ನಂತರ ಟಾಪ್ ಎಂಟಟೈನರ್‍ಸ್ ಉಜಿರೆ ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.