ಉಜಿರೆ: ಯಾಂತ್ರೀಕೃತ ನೇಜಿನಾಟಿ ಕಾರ್ಯಕ್ರಮ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಬೆಳ್ತಂಗಡಿ ಕೃಷಿಯಂತ್ರಧಾರೆ ಇದರ ಸಹಯೋಗದಲ್ಲಿ ಯಾಂತ್ರೀಕೃತ ನೇಜಿನಾಟಿ ಕಾರ್ಯಕ್ರಮವು ಸೆ.11 ರಂದು ಜರುಗಿತು. ಉಜಿರೆ ಸದಾನಂದ ನಿಲಯ ಸದಾಶಿವ ಶೆಟ್ಟಿ ರವರ ಗದ್ದೆಯಲ್ಲಿ ಯಾಂತ್ರಿಕೃತ ನೇಜಿನಾಟಿ ಪ್ರಾತ್ಯಕ್ಷಿಕೆ ಮಾಡಲಾಯಿತು.
ಶಾಸಕ ಹರೀಶ್ ಪೂಂಜ ಕೃಷಿಯಂತ್ರೋಪಕರಣದಲ್ಲಿ ನೇಜಿನಾಟಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಆಧುನಿಕ ಸಮಾಜ ನಿರ್ಮಾಣ ಮಾಡುವ ಕೆಲಸ ಪೂಜ್ಯ ಖಾವಂದರು ಮಾಡುತ್ತಿದ್ದಾರೆ ಮತ್ತು ರೈತರು ಕೃಷಿಯಲ್ಲಿ ಬದುಕನ್ನು ಕಟ್ಟುವ ಕೆಲಸವನ್ನು ಗ್ರಾಮಾಭಿವೃಧ್ಧಿ ಯೋಜನೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿ ಕಾರ್ಯದಲ್ಲಿ ನಿರಾಸಕ್ತಿಯನ್ನು ತೋರುತ್ತಿದ್ದು, ಹೆಚ್ಚು ಹೆಚ್ಚು ಕೃಷಿ ಪೂರಕವಾದ ಕಾರ್ಯಕ್ರಮವನ್ನು ನಡೆಸಿದ್ದಲ್ಲಿ, ಆಧುನಿಕ ಕೃಷಿ ಪದ್ದತಿಯಲ್ಲಿ ಹೆಚ್ಚು ಲಾಭದಾಯಕವಾಗಿ ಇಸ್ರೇಲ್ ಮಾದರಿಯಲ್ಲಿ ಕೃಷಿಯನ್ನು ಮಾಡಬಹುದು ಹಾಗೂ ಕೃಷಿಗೆ ಪೂರಕವಾದ ಅನುದಾನವನ್ನು ಕೃಷಿ ಇಲಾಖೆಯ ಮೂಲಕ ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಶ್ರೀ.ಕ್ಷೆ.ಧ.ಗ್ರಾ.ಯೋಜನೆಯ ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮಾತನಾಡಿ, ಪೂಜ್ಯ ಖಾವಂದರು ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಯಂತ್ರಧಾರೆ ಕೇಂದ್ರಗಳಿಗೆ ಹೊಸ ಹೊಸ ಯಂತ್ರಗಳನ್ನು ನೀಡುತ್ತಾ, ರೈತರು ಕಡಿಮೆ ಖರ್ಚಿನಲ್ಲಿ ಯಾಂತ್ರೀಕೃತ ಬೇಸಾಯವನ್ನು ಮಾಡಲು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೇಮಾ, ಕೃಷಿ ಅಧಿಕಾರಿ ಚಿದಾನಂದ ಹೂಗರ್, ಹುಮೇರಾ ಜಬೀನ್, ಹಿರಿಯರಾದ ಸುಬ್ರಯ್ಯ ಶೆಣೈ, ರಮೇಶ್ ಶೆಟ್ಟಿ, ಕೃಷಿಯಂತ್ರಧಾರೆಯ ಪ್ರಬಂಧಕ ಸಂತೋಷ್ ಕುಮಾರ್, ಕೃಷಿ ಅಧಿಕಾರಿ ಹರಿಪ್ರಸಾದ್, ಮೇಲ್ವಿಚಾರಕಿ ಶ್ರೀಮತಿ ಅಶ್ವಿತಾ, ಗಣೇಶ್ ಉಲ್ಲಾಸ್, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿ, ಪ್ರಾದೇಶಿಕ ಸಮನ್ವಯಾಧಿಕಾರಿ ಅಶೋಕ್.ಬಿ ಕಾರ್ಯಕ್ರಮ ನಿರೂಪಿಸಿ, ಉಮೇಶ್ ಶೆಟ್ಟಿ ಧನ್ಯವಾದವಿತ್ತರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.