ಉಜಿರೆ: ಶುಭ ಜ್ಯುವೆಲ್ಲರ್ಸ್ ಮತ್ತು ವರ್ಕ್ಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಉಜಿರೆ ಚಾರ್ಮಾಡಿ ರಸ್ತೆ ಶ್ರೀ ಜನಾರ್ದನ ದೇವಸ್ಥಾನದ ದ್ವಾರದ ಎದುರು ಇರುವ ಮಾಡ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ಶುಭ ಜ್ಯುವೆಲ್ಲರ್ಸ್ ಮತ್ತು ವರ್ಕ್ಸ್‌ನ ಉದ್ಘಾಟನಾ ಸಮಾರಂಭವು ಸೆ.10 ರಂದು ಜರುಗಿತು.

ಉದ್ಘಾಟನೆಯನ್ನು ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರವರು ನೆರವೇರಿಸಿ ಮಾತನಾಡಿ, ಬೆಳ್ಳಿ, ಬಂಗಾರ ಇದ್ದಲ್ಲಿ ಶ್ರೀ ದೇವರ ಸಾನಿಧ್ಯವಿದೆ ಎಂದು ನಮ್ಮ ಸಂಸ್ಕೃತಿಯಲ್ಲಿದೆ ಎಂದರು. ಶ್ರೀ ಜನಾರ್ದನ ದೇವರ ಸನ್ನಿಧಿಯಲ್ಲಿ ಪ್ರಾರಂಭಗೊಂಡ ಈ ಮಳಿಗೆ, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ, ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಜ್ಯುವೆಲ್ಲರ್‍ಸ್‌ನ ಆನಂದ ಆಚಾರ್ಯ, ಶಾಂತಾರಾಮ ಜ್ಯುವೆಲ್ಲರ್‍ಸ್‌ನ ಶ್ರೀಮತಿ ಚಂದ್ರಾವತಿ ಆನಂದ ಆಚಾರ್ಯ, ಮಾಡ ಕಾಂಪ್ಲೆಕ್ಸ್‌ನ ಶ್ರೀಮತಿ ರಘುನಾಥ ಮಾಡ, ಕನ್ನಾಜೆ ಲಾಯಿಲ, ಶ್ರೀಮತಿ ಮತ್ತು ಮೋನಪ್ಪ ಆಚಾರ್ಯ, ಬೆಳಾಲು ಶ್ರೀಮತಿ ಮತ್ತು ಶ್ರೀನಿವಾಸ ಆಚಾರ್ಯ, ಪೂಜಾ ವಿಧಿಗಳನ್ನು ನೆರವೇರಿಸಿದ ಮೈಸೂರಿನ ಶ್ರೀಮತಿ ಮತ್ತು ಶ್ರೀಕಾಂತ್ ಆಚಾರ್ಯ, ಹಾಗೂ ಅನೇಕರು ಭಾಗವಹಿಸಿದ್ದರು.

ಶುಭ ಜ್ಯುವೆಲ್ಲರ್‍ಸ್‌ನ ಮಾಲಕ ಸುಭಾಷ್ ಮತ್ತು ಬೆಳಾಲು ಶ್ರೀಮತಿ ಮತ್ತು ಶ್ರೀ ಈಶ್ವರಪ್ಪ ಆಚಾರ್ಯ ಕುಟುಂಬಸ್ಥರು ಬಂದ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.