ನಾರಾವಿ: ಕುಕ್ಕೆರೆಬೆಟ್ಟು ಗುತ್ತು ಶ್ರೀಮತಿ ದೇಜಮ್ಮ ನಿಧನ

ನಾರಾವಿ ಗ್ರಾಮದ ದುಗ್ಗತಿ ಕಾರಿಮನೆ ದಿ| ಶ್ರೀವರ್ಮ ಬುಣ್ಣು ರವರ ಧರ್ಮ ಪತ್ನಿ ಕುಕ್ಕೆರೆಬೆಟ್ಟು ಗುತ್ತು ಶ್ರೀಮತಿ ದೇಜಮ್ಮ (91.ವ)ರವರು ಸೆ.10 ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಜೈನಧರ್ಮದ ವೃತ, ನೋಂಪಿ ಇತ್ಯಾದಿಗಳನ್ನು ಅತೀ ನಿಷ್ಠೆಯಿಂದ ಪಾಲಿಸಿಕೊಂಡ ಓರ್ವ ಆದರ್ಶ ಗೃಹಿಣಿಯಾಗಿ ಜೈನ ಸಮಾಜಕ್ಕೆ ಆದರ್ಶರಾಗಿದ್ದರು. ಇವರು ದಾನ ಧರ್ಮಗಳಿಂದ ಅಪಾರ ಜನಪ್ರಿಯತೆಗಳಿಸಿದ್ದರು. ಇವರ ಮರಣ ವಾರ್ತೆ ತಿಳಿದು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.
ಮೃತರು ಜಯವರ್ಮ ಬುಣ್ಣು ಹಾಗೂ ಬೆಳ್ತಂಗಡಿಯ ಯುವ ನ್ಯಾಯವಾದಿ ರತ್ನವರ್ಮ ಬುಣ್ಣು ಸೇರಿ ಎರಡು ಗಂಡು, ವಸಂತಿ. ಸಿ. ಅಜ್ರಿ, ಚಂಪಾ ಪಿ. ಬುಣ್ಣು, ಮನೋರಮಾ, ಚಂದನ, ಭಾರತಿ ಸೇರಿ ಐವರು ಪುತ್ರಿಯರು, ಸೊಸೆ, ಡಾ| ಮೃಣಾಲಿನಿ, ಅಳಿಯಂದಿರಾದ ಪದ್ಮರಾಜ್ ಬುಣ್ಣು, ಶ್ರೀಧರ ಆರಿಗ, ಶಶಿಕಾಂತ ಹೆಗ್ಡೆ, ಧರಣೇಂದ್ರ ಕುಮಾರ್ ನಿಟ್ಟೆ, ಮೊಮ್ಮಕ್ಕಳು, ಬಂಧು ವರ್ಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.