ಮಚ್ಚಿನ ಗ್ರಾಮದ ನೆತ್ತರದಲ್ಲೊಂದು ಮಾದರಿ ಸ್ವಚ್ಛತಾ ಕಾರ್ಯಕ್ರಮ

ಮಚ್ಚಿನ: ನೆತ್ತರದಲ್ಲಿ ಮಚ್ಚಿನ ಗ್ರಾ. ಪಂ. ವಿಶೇಷ ಸಹಕಾರದೊಂದಿಗೆ ಭಾಗ್ಯಶ್ರೀ ಮಿತ್ರ ಮಂಡಳಿ, ಸಾರಥಿ ಕಲಾ ತಂಡ ನೆತ್ತರ, ಹಳೆ ವಿದ್ಯಾರ್ಥಿ ಸಂಘ ನೆತ್ತರ, ಎಸ್‌ಡಿಎಂಸಿ ಮತ್ತು ನೆತ್ತರ ಶಾಲಾ ಪೋಷಕರು ಹಾಗೂ ಊರವರ ಪಾಲ್ಗೊಳ್ಳುವಿಕೆಯಿಂದ ನೆತ್ತರದಿಂದ-ಅಂಬ್ಡಾಲ್ – ಬಂಗೇರಕಟ್ಟೆ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಪೊದೆಗಳನ್ನು ತೆಗೆಯುವ ಯಶಸ್ವಿ ಮಾದರಿ ಸ್ವಚ್ಛತಾ ಶ್ರಮದಾನ ಸೆ. 9 ರಂದು ನಡೆಯಿತು.
ಬದಲಾವಣೆ ನಮ್ಮಿಂದಲೇ…ಎನ್ನುವ ಧ್ಯೇಯ ವಾಕ್ಯದಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸ್ವಚ್ಛತಾ ಶ್ರಮದಾನದಲ್ಲಿ ನೆತ್ತರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮನಾಥ ಪೂಜಾರಿ, ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ, ಭಾಗ್ಯಶ್ರೀ ಮಿತ್ರ ಮಂಡಳಿ ಉಪಾಧ್ಯಕ್ಷ ಹರೀಶ್ ಮಚ್ಚಗುರಿ, ನೆತ್ತರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ್ ಮಚ್ಚಗುರಿ, ಸ್ಥಳೀಯರಾದ ನವೀನ್ ಕುಮಾರ್ ಊರ್ಲಬೆಟ್ಟು, ಪ್ರವೀಣ್ ಮುಂಡಕಜೆ, ಮಹಾಬಲ ದೇವಾಡಿಗ, ಮೋಹನ ದಾಸ್ ಶೆಟ್ಟಿ ನೆತ್ತರ, ವಿಶ್ವನಾಥ ಮಡವು, ಪುರಂದರ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಮೋನಪ್ಪ ಪೂಜಾರಿ, ನವೀನ್ ನಾಯ್ಕ್,ನಾರಾಯಣ ಊರ್ಲ, ಬಾಬು ನೆತ್ತರ, ಪದ್ಮ ನಾಯ್ಕ್, ಸೋಮ ಮೊದಲಾದವರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.