ಇಳಂತಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1

ಇಳಂತಿಲ: ಸೆ.9 ರಂದು ಹಾಲು ಉತ್ಪಾದಕರ ಸಹಕಾರಿ ಸಂಘದ 2017-18 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷರಾದ ವಿಜಯ್ ಕುಮಾರ್ ಕಲ್ಲಳಿಕೆಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಂಘವು 2017-18 ನೇ ಸಾಲಿನಲ್ಲಿ 668003/- ರೂಪಾಯಿಗಳನ್ನು ಲಾಭವಾಗಿಗಳಿಸಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು. ಸದಸ್ಯರಿಗೆ 16% ಡಿವಿಡೆಂಡ್ ಘೋಷಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯರವರು ಶುದ್ಧ ಹಾಲು ಉತ್ಪಾದನೆಯ ಅವಶ್ಯಕತೆ ಮತ್ತು ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ಕೆ. ವೆಂಕಟ್ರಮಣ ಭಟ್, ಪೆಲಿಪ್ಪಾರ್ ರವರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕೆ. ಮಹಾಬಲ ಶೆಟ್ಟಿಯವರು ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ವಿನ್ಸ್ಂಟ್ ಬ್ರಾಗ್ಸ್‌ರವರು ಧನ್ಯವಾಸ ಸಮರ್ಪಣೆ ಮಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕುಂಞ ಎಮ್.ಎನ್ ಮಿತ್ತಿಲ, ನಿರ್ದೇಶಕರಾದ ಶಂಕರ್ ಭಟ್ ನಿಡ್ಡಾಜೆ, ಬಾಬು ಪೂಜಾರಿ ಪಾಡೆಂಕಿ, ದೇವಣ್ಣ ನಾಯ್ಕ ಪಾರಡ್ಕ, ಸುನೀಲ್ ಅರ್ಬಿ, ಯಮುನಾ ಕೋಡಿಯಡ್ಕ, ಹುಕ್ರಪ್ಪ ಗೌಡ, ನಂದಿಲ, ಜಯಂತಿ ಕಾರಿಂಜ, ನಾರಾಯಣ ಗೌಡ ಕುಮಾರ್ ಜಾಲು, ಗಣೇಶ್ ಪೂಜಾರಿ ನೀನಿ, ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.