ಮಾಜಿ ಶಾಸಕ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಶಾಸಕರು ಸುಳ್ಳು ಆರೋಪ ಮಾಡುತ್ತಿದ್ದಾರೆ- ಬಂಗೇರ

ಬೆಳ್ತಂಗಡಿ : ಹಿಂದುಗಳ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕಾರ್ಯದಲ್ಲಿ ಶಾಸಕ ಹರೀಶ್ ಪೂಂಜ ಸಾರ್ವಜನಿಕ ಸಭೆಯಲ್ಲಿ ಹೇಳಿ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ಸೆ.8 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದರು.
ದಲಿತ ಸಂಘಟನೆಯಲ್ಲಿ ಭಾಗವಹಿಸಿದ್ದು ನಿಜ. ಆದರೆ ಕೇಸರಿ ಬಟ್ಟೆ ಸುಟ್ಟಿರುವರು ನಾನು ಸಭೆಯಿಂದ ಬಂದ ಆನಂತರ ಚಾ ಮಾರುವವರು ಅಥವಾ ಹಾಲು ಮಾರುವವರು ಯಾರಿಗಾದರೂ ಶಾಸಕನಾಗುವ ಅವಕಾಶವಿದೆ. ಆದರೆ ಇಂತಹ ಸ್ಥಾನ ಹೊಂದಿದವರು ತಪ್ಪು ಮಾಹಿತಿ ನೀಡಬಾರದು. ಕಾಂಗ್ರೆಸ್ ಆಡಳಿತದಲ್ಲಿ ತಾಲೂಕಿನಲ್ಲಿ ಅನೇಕ ಕೆಲಸ, ಕಾಮಗಾರಿಗಳು ಆಗಿದೆ. ಈ ಯೋಜನೆಗಳು ಕೇಂದ್ರ ಸರಕಾರ ಮಾಡಿದೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಆಯ್ಕೆಯಾಗಿದ್ದಾರೆ. ಪ್ರಧಾನಿಯವರೂ ಕೂಡ ಚುನಾವಣೆಗೆ ಮೊದಲು ಅನೇಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು 4 ವರ್ಷ ಕಳೆದರೂ ಯಾರ ಖಾತೆಗೂ ರೂ.15 ಸಾವಿರ ಮತ್ತು ಕಪ್ಪು ಹಣ ತರುವ ಕೆಲಸ ಮಾಡಲಿಲ್ಲ. ಕಾಂಗ್ರೇಸ್ ಆಡಳಿತ ಇರುವಾಗ ಅನೇಕ ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಪ್ರಸುತ್ತ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಲೇ ಇದೆ. ಶಾಸಕರೂ ಕೂಡ ರಸ್ತೆ ರೀಪೇರಿ, ಸೇತುವೆ, ನಿರುದ್ಯೋಗಿಗಳಿಗೆ ಉದ್ಯೋಗ ಮೊದಲಾದ ಭರವಸೆ ನೀಡಿದ್ದಾರೆ. 4 ತಿಂಗಳೂ ಅದರು ಯಾವುದೇ ಕೆಲಸ ಮಾಡಲಿಲ್ಲ. ಧರ್ಮಸಂಸದ್ ಅಂಗವಾಗಿ ತಾಲೂಕಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಗುಂಡಿಮುಚ್ಚುವ ಕೆಲಸ ಮಂಜೂರು ಮಾಡಿ ಕಾಮಗಾರಿ ಆಗಿದೆ. ಲಾಲದಲ್ಲಿ ಮಾಡಿರುವ ಮೋರಿ ಕೆಲಸವನ್ನು ದೊಡ್ಡ ಸಾಧನೆ ಎಂದು ಹೇಳಿಕೊಂಡಿದ್ದಾರೆ. ಇದೂ ಕೂಡ ಉಸ್ತುವಾರಿ ಸಚಿವರು ಮಾಡಿರುವುದು.
ಕಿಲ್ಲೂರಿನ ಕಾಜೂರು ಸೇತುವೆಗೆ ಅಲ್ಲಿಯ ದರ್ಗಾದ ಮುಂಭಾಗಬೇಕು ಎಂದು ಅಲ್ಲಿದ ಸ್ಥಳೀಯ ಪಟ್ಟಾ ಸ್ಥಳ ಖರೀದಿ ಮಾಡಿ ಕೊಡುವ ಬಗ್ಗೆ ಹೇಳಿರುವುದರಿಂದ ರೂ. 2 ಕೋಟಿ ವೆಚ್ಚದ ರಸ್ತೆ ಕಾಂಗ್ರೇಸ್ ಶಾಸಕನಾಗಿರು ವಾಗಲೇ ನಾನು ಮಂಜೂರು ಮಾಡಿ ಕಾಮಗಾರಿ ಆಗಿದೆ. ಅಲ್ಲದೆ ರೂ. 1.20 ಕೋಟಿ ರಸ್ತೆಗೆ ಶಿಲಾನ್ಯಾಸ ಮಾಡಲಾಗಿದೆ. ಅದೇ ರಸ್ತೆಗೆ ಪೂಂಜರವರು ಶಿಲಾನ್ಯಾಸ ಮಾಡಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ತಾಲೂಕಿನಲ್ಲಿ ಯಾವುದೇ ಶಾಸಕರು ಒಮ್ಮೆ ಶಿಲಾನ್ಯಾಸ ಮಾಡಿದ ಕಾಮಗಾರಿಗೆ ಮರು ಶಿಲಾನ್ಯಾಸ ಮಾಡಲಿಲ್ಲ ಇವರು ಮಾಡಿ ತಪ್ಪು ಮಾಹಿತಿ ನೀಡುತ್ತಿದ್ದಾರೆ.
ತಾಲೂಕಿನಲ್ಲಿ ಕೋಮಗಲಭೆ ಮಾಡಿ ಮತಗಳಿಸುವುದು ಬಿಜೆಪಿ ಮತ್ತು ಆರ್.ಎಸ್.ಎಸ್ ಶಾಸಕರು, ಹಿಂದೂಗಳು ಬಿಜೆಪಿಗೆ ಮತ ನೀಡುವವರು ಎಂದು ಹೇಳಿದ್ದಾರೆ. ಆದರೆ ಕಾಂಗ್ರೇಸ್ ಪಕ್ಷದವರು ಎಲ್ಲಾ ಜಾತಿ, ಧರ್ಮದವರು ಒಂದೇ ಎಂದು ಹೇಳಿ ಮತ ಗಳಿಸುತ್ತೇವೆ. ಇಂತಹ ತಪ್ಪು ಮಾಹಿತಿಯನ್ನು ನೀಡುವ ಕೆಲಸ ಗೊತ್ತಿದ್ದು ಗೊತ್ತಿಲ್ಲದೆಯೋ ಮಾಡುತ್ತಿದ್ದಾರೆ. ಜವಾಬ್ದಾರಿಯಲ್ಲಿ ರುವವರು ಇಂತಹ ಮಾಹಿತಿ ನೀಡುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸದಸ್ಯರುಗಳಾದ ಧರಣೇಂದ್ರ ಕುಮಾರ್, ಶ್ರೀಮತಿ ನಮಿತಾ, ಬ್ಲಾಕ್ ಕಾಂಗೇಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ಕಾಂಗ್ರೇಸ್ ಪಕ್ಷದ ಹಿರಿಯರಾದ ಮಂಜುನಾಥ ಕಾಮತ್, ಮನೋಹರ್ ಇಳಂತಿಲ, ಅವಿಲ್ ಪೈ ಉಪಸ್ಥಿತದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.