ಕೊಲ್ಲಿ: ಶ್ರೀ ಕೃಷ್ಣ ಜನ್ಮಾಷ್ಟಮಿ

Advt_NewsUnder_1
Advt_NewsUnder_1
Advt_NewsUnder_1

ಕೊಲ್ಲಿ: ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಹಾಗೂ ಯುವ ಕೇಸರಿ ಗೆಳೆಯರ ಬಳಗ ಮಾರಿಗುಡಿ, ಕಿಲ್ಲೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಒಕ್ಕೂಟ ಕೊಲ್ಲಿ-ಕರಿಯಾಲು ಇದರ ಸಹಕಾರದೊಂದಿಗೆ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಸಮೀಪದ ಡೀಕಯ್ಯ ದೇವಾಡಿಗ ರವರ ಗದ್ದೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ, ಧಾರ್ಮಿಕ ಸಭೆ ಮತ್ತು ಕೆಸರು ಗದ್ದೆ ಆಟೋಟ ಸ್ಪರ್ಧೆ ಸೆ.9 ರಂದು ಜರುಗಿತು.
ಕಾರ್ಯಕ್ರಮವನ್ನು ಬಿ.ಕೆ ಸಂತೋಷ್ ಕುಮಾರ್ ಕಿಲ್ಲೂರು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಿತ್ತಬಾಗಿಲು ಗ್ರಾ.ಪಂ.ಅಧ್ಯಕ್ಷ ನಾರಾಯಣ ಪಾಟಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು. ಅತಿಥಿಗಳಾಗಿ ವಿ.ಹಿಂಪ ಮಂಗಳೂರು ವಿಭಾಗದ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಜಯಕರ ಶೆಟ್ಟಿ, ದ.ಕ.ವಿ.ಹಿಂ.ಪ ಕಾರ್ಯಾಧ್ಯಕ ಭಾಸ್ಕರ್ ಧರ್ಮಸ್ಥಳ, ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್, ದೇವಸ್ಥಾನದ ಮಾಜಿ ಅಧ್ಯಕ್ಷ ವಾಸುದೇವ ಕಕ್ಕೆನೇಜಿ,ಭಜರಂಗದಳ ಸಂಚಾಲಕ ವಸಂತ ಶೆಟ್ಟಿ, ವಿ.ಹಿ.ಪಂ ಅಧ್ಯಕ್ಷ ಸುರೇಶ್ ಪೂಜಾರಿ, ಪ್ರಗತಿ ಬಂಧು ಒಕ್ಕೂಡದ ಕರಿಯಾಲು ವಿಭಾಗದ ಅಧ್ಯಕ್ಷ ಧರ್ಣಪ್ಪ ಗೌಡ, ಕೊಲ್ಲಿ ವಿಭಾಗದ ಶ್ರೀಧರ ದೇವಾಡಿಗ ಭಾಗವಹಿಸಿದ್ದರು.
ವಿನಯಚಂದ್ರ. ಎಸ್ ಸೇನೆರೆಬೆಟ್ಟು ಸ್ವಾಗತಿಸಿ, ಮೋನಪ್ಪ ಗೌಡ ಕಾರ್ಯಕ್ರಮ ನಿರೂಪಿಸಿ, ಎನ್ ವಿನಯಚಂದ್ರ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.