ಉಜಿರೆ ಕಾಲೇಜಿನಲ್ಲಿ ನೆಟ್ ಪರೀಕ್ಷೆ ತರಬೇತಿ ಶಿಬಿರ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಆಶ್ರಯದಲ್ಲಿ ಸೆ.8 ರಂದು ರಾಜ್ಯ ಮಟ್ಟದ ಕಾಲೇಜು ನೆಟ್ ಹಾಗೂ ಸ್ಲೆಟ್ ಪರೀಕ್ಷೆಗೆ ತರಬೇತಿ ಕಾರ್ಯಗಾರ ಏರ್ಪಡಿಸಿದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ತರಬೇತಿಯಲ್ಲಿ ಖ್ಯಾತರಾಗಿರುವ ತ್ರಿವೇಂಡ್ರಮ್‌ನ ರಾಷ್ಟ್ರೀಯ ತರಬೇತುದಾರ ಕಲ್ಯಾಣಿ ವಲ್ಲತ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವರು. ಆಂಗ್ಲ ಸಾಹಿತ್ಯ ಹಾಗೂ ಭಾಷೆಯನ್ನಾದರಿಸಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಎಮ್.ಎ ಇಂಗ್ಲೀಷ್ ವಿದ್ಯಾರ್ಥಿಗಳು ಹಾಗೂ ನೆಟ್, ಸ್ಲೆಟ್ ಪರೀಕ್ಷೆಗೆ ಆಕಾಂಕ್ಷಿಗಳಾಗಿರುವ ಆಂಗ್ಲ ಭಾಷ ಸ್ನಾತಕೋತ್ತರ ಪದವೀದರರು, ಶಿಕ್ಷಕರು ಪಾಲ್ಗೊಳ್ಳಲು ಅವಕಾಶವಿದೆ.
75 ಜನರಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳಿಗೆ 200 ರೂ. ಹಾಗೂ ಶಿಕ್ಷಕರಿಗೆ 300 ರೂ ಶುಲ್ಕ ನಿಗದಿಪಡಿಸಲಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಭಾಗದ ಮುಖ್ಯಸ್ಥ ಶಂಕರ ನಾರಾಯಣ ಅವರನ್ನು ಸಂಪರ್ಕಿಸಬಹುದು.
ಮೊಬೈಲ್ ನಂಬರ್- 9448448111

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.