ತಣ್ಣೀರುಪಂತ: ವ್ಯಕ್ತಿ ನಾಪತ್ತೆ

ತಣ್ಣೀರುಪಂತ: ತಣ್ಣೀರುಪಂತ ಗಾಮ್ರ ನಿವಾಸಿ ವಸಂತ.ಕೆ (67.ವ) ರವರು ಮಂಗಳೂರಿನಲ್ಲಿರುವ ತಮ್ಮ ಪುತ್ರರ ಮನೆಗೆ ತಮ್ಮ ಪತ್ನಿಯೊಂದಿಗೆ ತೆರಳಿದ್ದು, ಅಲ್ಲಿಂದ ಧಿಡೀರ್ ನಾಪತ್ತೆಯಾದ ಘಟನೆ ಸೆ.4 ರಂದು ನಡೆದಿದೆ.
ವಸಂತ.ಕೆ ರವರಿಗೆ 3 ಪುತ್ರರು, ಓರ್ವ ಪುತ್ರಿ ಸೇರಿದಂತೆ ನಾಲ್ಕು ಮಕ್ಕಳು. ಮೂವರೂ ಪುತ್ರರೂ ಮಂಗಳೂರಿನ ಅಶೋಕ ನಗರದ ಹೊಗೆಬೈಲಿನ ನರಸಪ್ಪ ಕಂಪೌಂಡ್‌ನಲ್ಲಿ ವಾಸವಾಗಿದ್ದಾರೆ. ತಣ್ಣೀರುಪಂತದಲ್ಲಿ ವಸಂತ.ಕೆ ರವರಿಗೆ ಕೃಷಿ ಭೂಮಿ ಇದ್ದು, ಅಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಮೊಸರು ಕುಡಿಕೆ ಹಬ್ಬದ ಪ್ತಯುಕ್ತ ಸೆ.1 ರಂದು ವಸಂತ ರವರು ಪತ್ನಿಯೊಂದಿಗೆ ಮಂಗಳೂರಿನಲ್ಲಿರುವ ಪುತ್ರರ ಮನೆಗೆ ತೆರಳಿದ್ದರು. ಸೆ.4 ರಂದು ಬೆಳಿಗ್ಗೆ 6 ಗಂಟೆಗೆ ಪುತ್ರರ ಮನೆಯಿಂದ ಯಾರಿಗೂ ತಿಳಿಸದೆ ಹೊರಟು ಹೋಗಿದ್ದು, ಇತ್ತ ಊರಿಗೂ ಹೋಗದೇ, ಪುತ್ರರ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪತ್ನಿ ಮತ್ತು ಮೂವರೂ ಪುತ್ರರು ಎಲ್ಲಾ ಕಡೆ ಹುಡುಕಿದ್ದು ಎಲ್ಲಿಯೂ ಪತ್ತ್ತೆಯಾಗದ ಕಾರಣ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಸಂತ ರವರು ಇತ್ತೀಚೆಗೆ ಹೊಸ ಮನೆ ಕಟ್ಟಿಸಿದ್ದು, ಅದಕ್ಕೆ ಸಾಲ ಮಾಡಿದ್ದರು. ಸಾಲ ಮರುಪಾವತಿ ವಿಚಾರದಲ್ಲಿ ಮಾನಸಿಕ ಒತ್ತಡದಿಂದ ಇದ್ದರು. ಇದೇ ಕಾರಣಕ್ಕಾಗಿ ಅವರು ಹೇಳದೆ ಕೇಳದೆ ಹೋಗಿರಬಹುದು ಎಂದು ಪುತ್ರರು ಶಂಕೆ ವ್ಯಕ್ತಪಡಿಸಿದ್ದಾರೆ.
ವಸಂತ್ ರವರು 5.1 ಅಡಿ ಎತ್ತರ, ಕಪ್ಪುಬಿಳಿ ಮಿಶ್ರಿತ ತಲೆಕೂದಲು, ಗೋದಿ ಮೈಬಣ್ಣ, ಉದ್ದ ಮುಖ, ಸಪೂರ ಶರೀರ ಹೊಂದಿದ್ದು, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮತ್ತು ತುಳು ಭಾಷೆಯನ್ನು ಮಾತನಾಡುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಉರ್ವ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.