ಬೆಳ್ತಂಗಡಿ: ಬಂಟ್ವಾಳ ಹೋಂಗಾರ್ಡ್ ಘಟಕಕ್ಕೆ ಸೇರಿದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಭಾಶ್ಚಂದ್ರ ಎಂಬಾತನನ್ನು ಜಿಲ್ಲಾ ಹೋಂ ಗಾರ್ಡ್ ಘಟಕದ ಅಧಿಕಾರಿಗಳು ಅಮಾನತು ಗೊಳಿಸಿದ್ದಾರೆ. ಈತ ಪುತ್ತಿಲ ಗ್ರಾಮದ ಸಿರಾಜುದ್ದೀನ್ ಎಂಬ ವಿದ್ಯಾರ್ಥಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪ್ರಚೋಧನಕಾರಿ ಬರಹದ ಹಿನ್ನಲೆಯಲ್ಲಿ ಪ್ರಕರಣದ ಬಗ್ಗೆ ಪುಂಜಾಲಕಟ್ಟೆ ಪೊಲೀಸರಿಗೆ ಬಂದ ದೂರಿನ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದರು.