ಪಿ.ಎಸ್. ಆಶಾ ಲಕ್ಷ್ಮೀ ಮಚ್ಚಿನರಿಗೆ ಎನ್‌ಐಟಿಕೆ ಯಿಂದ ಡಾಕ್ಟರೇಟ್

ಬೆಳ್ತಂಗಡಿ: ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕಿ ಪಿ.ಎಸ್. ಆಶಾ ಲಕ್ಷ್ಮೀ ಮಚ್ಚಿನ ಅವರಿಗೆ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ (ಎನ್.ಐ.ಟಿ.ಕೆ) ಪಿಎಚ್‌ಡಿ ಪದವಿ ನೀಡಿದೆ.
ಎನ್‌ಐಟಿಕೆಯ ಸಹಾಯಕ ಪ್ರಾಧ್ಯಾಪಕ ಡಾ. ಎ.ವಿ. ನರಸಿಂಹಧನ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಬಣ್ಣದ ಮತ್ತು ಅತಿಗೆಂಪು ವೀಡಿಯೋ ಚಿತ್ರಣದಲ್ಲಿ ವಸ್ತುಗಳ ಜಾಡೀಕರಣ ಎಂಬ ಸಂಶೋಧನಾ ಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಆಶಾ ಅವರು ಉದಯವಾಣಿ ಕುಂದಾಪುರದ ಉಪ ಮುಖ್ಯ ವರದಿಗಾರ ಲಕ್ಷ್ಮೀ ಮಚ್ಚಿನ ಅವರ ಪತ್ನಿ. ಈ ಹಿಂದೆ ಅವರು ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.