ಗೋಪಾಲಕೃಷ್ಣ ತುಳುಪುಳೆ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ನಾರಾವಿ: ಪ್ರೌಢ ಶಾಲಾ ವಿಭಾಗದಲ್ಲಿ ನಾರಾವಿ ಪ್ರೌಢ ಶಾಲಾ ಹಿಂದಿ ಶಿಕ್ಷಕ ಗೋಪಾಲಕೃಷ್ಣ ತುಳಪುಳೆ ರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅನೇಕ ಕಡೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಗೋಪಾಲಕೃಷ್ಣ ತುಳುಪುಳೆ ಅವರು ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಶಾಲಾ ಮಕ್ಕಳಿಗಾಗಿ ರಕ್ತದಾನ ಶಿಬಿರ ಅಯೋಜನೆ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದಾರೆ. ವನಮಹೋತ್ಸವ, ಮಕ್ಕಳಿಗೆ ಮತ್ತು ಹೆತ್ತವರಿಗೆ ಗಿಡಗಳ ವಿತರಣೆ, ಸ್ವಚ್ಚತಾ ರ್‍ಯಾಲಿ ಸಂಘಟನೆ, ಪರಿಣಾಮಕಾರಿಯಾಗಿ ಹಿಂದಿ ಭಾಷಾ ಬೋಧನೆ, ಭಾರತ ಸೇವಾದಳದಲ್ಲಿ ಸಹಾಯಕ ಶಿಕ್ಷಣ ತರಬೇತಿ, ಜಿಲ್ಲಾ ಮಟ್ಟದಲ್ಲಿ ಹಿಂದಿ ಪ್ರಶ್ನೆ ಪತ್ರಿಕೆ ತಯಾರಿ, ಹಿಂದಿ ಭಾಷಾ ಪ್ರಯೋಗಾಲಯ, ರಾಜ್ಯಮಟ್ಟದ ಎಂಆರ್‌ವಿ ರಚನಾ ತರಬೇತುದಾರರ ಕೈಪಿಡಿ ರಚನೆ, 2014 ರಲ್ಲಿ ತಾ. ಮಟ್ಟದ ಹಿಂದಿ ಭಾಷಾ ಶಿಕ್ಷಕರ ಸಂಘದ ಸ್ಥಾಪನೆ, ಹಿಂದಿ ದಿವಸ್ ಆಚರಣೆಗೆ ನೇತೃತ್ವ, ವಿದ್ಯಾರ್ಥಿಗಳಿಗೆ ನಾಟಕ ಮತ್ತು ಸೃಜನಾತ್ಮಕ ಕಲೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಪಾತ್ರನಿರ್ವಹಿಸುವಿಕೆ, ಐತಿಹಾಸಿಕ ಪ್ರದೇಶಗಳಿಗೆ ಪ್ರವಾಸ, ಮಕ್ಕಳ ಮನೆಮನೆ ಬೇಟಿ, ತರಗತಿಗಳಲ್ಲಿ ಹಿಂದಿ ಹಾಡಿನ ಮೂಲಕ ನೃತ್ಯರೂಪಕ ತಯಾರಿ, ಬಡ ವಿದ್ಯಾರ್ಥಿಗಳಿಗೆ ನೆರವು ಇತ್ಯಾಧಿ ಕಾರ್ಯಗಳ ಮೂಲಕ ಅವರು ಪ್ರಶಸ್ತಿಗೆ ಅರ್ಹತೆ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.