ಹಳೆ ದ್ವೇಷ: ಗುರುವಾಯನಕೆರೆಯಲ್ಲಿ ಮುಸ್ಲಿಂ ಗುಂಪುಗಳ ನಡುವೆ ಹೊಡೆದಾಟ

ಗುರುವಾಯನಕೆರೆ: ಹಳೆ ದ್ವೇಶದ ಹಿನ್ನೆಲೆಯಲ್ಲಿ ಗುರುವಾಯನಕೆರೆಯಲ್ಲಿ ಎರಡು ಗುಂಪುಗಳು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಘಟನೆ ನಡೆದಿದೆ. ಅರಮಲೆಬೆಟ್ಟ ಬಳಿ ನಿವಾಸಿ ಅಟೋ ಚಾಲಕ ಅಬ್ದುಲ್ ಅವರ ಮಗಳ ನಿಶ್ಚಿತಾರ್ಥ ನಿಮಿತ್ತ ಬೆಂಗಳೂರಿನಲ್ಲಿದ್ದ ಇಬ್ಬರು ಮಕ್ಕಳಾದ ರಝಾಕ್ ಮತ್ತು ರಫೀಕ್ ಊರಿಗೆ ಬಂದಿದ್ದು, ಸಂಜೆ ಕಾರ್ಯಕ್ರಮ ಮುಗಿದ ಬಳಿಕ ರಝಾಕ್ ಬೈಕಿನಲ್ಲಿ ಗುರುವಾಯನಕೆರೆಗೆ ಹೋಗಿ ವಾಪಾಸು ಬರುವ ವೇಳೆ ಅರಮಲೆಬೆಟ್ಟ ಬಳಿ ಕಾದುಕುಳಿತಿದ್ದ ಸಫಾನ್, ಸರೂಕ್ ಮತ್ತು ಇರ್ಷಾದ್ ಮತ್ತಿತರರು ಅಡ್ಡಹಾಕಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ರಝಾಕ್ ಮನೆಗೆ ಹೋಗಿ ಅಲ್ಲೂ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಬಿಡಿಸಲು ಬಂದು ರಿಕ್ಷಾ ಚಾಲಕ ಹಂಝ ಅಲಿ ಮೇಲೆಯೂ ಮಾರಣಾಂತಿಕ ಗಾಯವಾಗಿದೆ. ಅವರು ಅಭಯಾ ಆಸ್ಪತ್ರೆಗೆ ದಾಖಲಾದರೆ, ಅಬ್ದುಲ್ ರಹಿಮಾನ್, ರಝಾಕ್ ಮತ್ತು ರಫೀಖ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಂಝಾನ್ ತಿಂಗಳಲ್ಲಿ ವಾಟ್ಸ್‌ಆಪ್‌ನಲ್ಲಿ ಬಂದಿದ್ದ ಊಟ ಮಾಡುವ ಫೋಟೋ ಮತ್ತು ಅದರ ಕೆಳಗಿದ್ದ ಅಡಿ ಬರಹದಲ್ಲಿದ್ದ, “ನಮ್ಮ ಸಮುದಾಯದ ಕೆಲವರು ಭರ್ಜರಿ ಊಟ ಮಾಡುತ್ತಿದ್ದಾರೆ” ಎಂದಿದ್ದುದೇ ಈ ದ್ವೇಶ ಬೆಳೆಯಲು ಮತ್ತು ಹಲ್ಲೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಆರೋಪಗಳು ಪರಾರಿಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಅಹಿತಕರ ಘಟನೆ ತಡೆಗೆ ವಿಶೇಷ ಮುತುವರ್ಜಿ ವಹಿಸಿರುವ ಎಸ್‌ಪಿ ಡಾ. ರವಿಕಾಂತೇ ಗೌಡ ನೇತೃತ್ವದ ಪೊಲೀಸ್ ತಂಡ ಈ ತಲವಾರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.