ರುಡ್‌ಸೆಟ್ ಉಚಿತ ತರಬೇತಿ

Advt_NewsUnder_1
Advt_NewsUnder_1

ಉಜಿರೆ : ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ನಡೆಯುವ ತರಬೇತಿಗಳ ವಿವರಗಳು: ಪಿ.ಎಮ್.ಇ.ಜಿ.ಪಿ (10 ದಿನಗಳು) : ಸೆ.21 ರಿಂದ ಸೆ.30 ರವರೆಗೆ (ಪ್ರದಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮ), ಮಹಿಳೆಯರ ಟೈಲರಿಂಗ್ (30 ದಿನಗಳು) : ಸೆ.14 ರಿಂದ ಅ.13 ರವರೆಗೆ, ಕಂಪ್ಯೂಟರ್ ಡಿ.ಟಿ.ಪಿ, (45 ದಿನಗಳು) : ಅ.08ರಿಂದ ನ.21 ರವರೆಗೆ, ಟಿ.ವಿ. ಟೆಕ್ನೀಷಿಯನ್ ಮತ್ತು ಎಲೆಕ್ಟ್ರೋನಿಕ್ಸ್ ರಿಪೇರಿ (30ದಿನಗಳು) : ಅ.01 ರಿಂದ ಅ.30 ರವರೆಗೆ, ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ (06 ದಿನಗಳು) : ನ.22 ರಿಂದ ನ.27 ರವರೆಗೆ, ಮೆನ್ಸ್ ಪಾರ್ಲರ್ ಮತ್ತು ಸೆಲೂನ್ ಉದ್ಯಮಿ (30 ದಿನಗಳು) : ಅ.15 ರಿಂದ ನ.13 ರವರೆಗೆ ಮೊದಲಾದ ತರಬೇತಿಗಳನ್ನು ಆಯೋಜಿಸಲಾಗಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಗಳಿಗೆ ಬರಲು 18 ರಿಂದ45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ 574240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ online ವೆಬ್‌ಸೈಟ್ ಮೂಲಕ www.rudsetujire.com ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ08256-236404ಗೆ ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.