ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ನಿಶ್ಚಿತ : ಹರೀಶ್ ಕುಮಾರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಉಳ್ಳಾಲ, ಬಂಟ್ವಾಳ ಮತ್ತು ಪುತ್ತೂರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಸರಕಾರದ ಆಡಳಿತವಿದ್ದು, ಐದು ವರ್ಷಗಳ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆ. ಹರೀಶ್ ಕುಮಾರ್ ಶಾಸಕರು ವಿಧಾನ ಪರಿಷತ್ ಹೇಳಿದರು.
ಅವರು ಆ.29ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಉಳ್ಳಾಲದ ಶಾಸಕರಾಗಿರುವ ಸಚಿವ ಯು.ಟಿ. ಖಾದರ್‌ರ ಮುತುವರ್ಜಿಯಲ್ಲಿ ಉಳ್ಳಾಲ ನಗರ ಸಭೆಯಲ್ಲಿ ಸುಮಾರು 200 ಕೋಟಿಗೂ ಮಿಕ್ಕಿ ಕೆಲಸಗಳು ನಡೆದಿದೆ, ಬಂಟ್ವಾಳದ ಶಾಸಕ ಮಾಜಿ ಸಚಿವ ರಮಾನಾಥ ರೈ ಅವರ ಉಸ್ತುವಾರಿಯಲ್ಲಿ ಮಿನಿ ವಿಧಾನ ಸೌಧ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಕೋಟಿಗೂ ಮಿಕ್ಕಿ ಅಭಿವೃದ್ಧಿಯಾಗಿದೆ. ಪುತ್ತೂರು ಶಾಸಕ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ಉತ್ತಮ ಪ್ರಗತಿ ಕಾರ್ಯ ನಡೆದಿದೆ. ಸಿದ್ಧರಾಮಯ್ಯ ನೇತೃತ್ವದಲ್ಲಿ ಈ ಮೂರು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದರಿಂದ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಬಂಟ್ವಾಳದಲ್ಲಿ ರಾಜಕೀಯ ಮುಖಂಡರೋರ್ವರು ಸೀಟು ಹಂಚಿಕೆಯಲ್ಲಿ ಅಪಸ್ವರ ಎತ್ತಿರುವುದನ್ನು ಪ್ರಸ್ತಾಪಿಸಿದ ಅವರು ಇಲ್ಲಿ ೨೭ ಕ್ಷೇತ್ರಗಳಲ್ಲಿ ೭ ಕ್ಷೇತ್ರಗಳನ್ನು ಅವರು ಹೇಳಿದ ಸಮಾಜಕ್ಕೆ ನೀಡಲಾಗಿದೆ ಯಾವುದೇ ತಾರತಮ್ಯ ಮಾಡದೇ ಎಲ್ಲ ಸಮಾಜಕ್ಕೂ ಸಮಾನವಾಗಿ ಟಿಕೇಟು ಹಂಚಲಾಗಿದೆ ಎಂದರು.
ಎಂಎಲ್‌ಸಿ ಮನೆಯಂಗಳದ ಶಾಲೆಯ ದುಸ್ಥಿತಿ ಎಂಬ ಮಾಧ್ಯಮದ ವರದಿಗೆ ಪ್ರತಿಕ್ರಿಯಿಸಿ ಈ ಶಾಲೆಯ ದುಸ್ಥಿತಿ ನಾನು ಎಂಎಲ್‌ಸಿ ಆದ ಬಳಿಕ ಆದದಲ್ಲ ಅದಕ್ಕೆ ಮೊದಲೇ ಇತ್ತು. ಶಾಲೆಯ ಸಮಸ್ಯೆ ಬಗ್ಗೆ ಈಗಾಗಲೇ ಮುಖ್ಯೋಪಾಧ್ಯಾಯರು ನನ್ನ ಗಮನಕ್ಕೆ ತಂದಿದ್ದು, ಇದಕ್ಕೆ ಸ್ಪಂದಿಸಿ ನಾನು ಈಗಾಗಲೇ ರೂ.೨೦ ಲಕ್ಷದ ಕ್ರಿಯಾಯೋಜನೆ ಮಾಡಿಸಿ ಶಿಕ್ಷಣ ಸಚಿವರಿಗೆ ನೀಡಿದ್ದೇನೆ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಕೊಳವೆ ಬಾವಿಯ ವ್ಯವಸ್ಥೆ ಮಾಡಿಸಿದ್ದೇನೆ. ಇದಕ್ಕೆ ಹಿಂದೆ ಆಡಳಿತ ನಡೆಸಿದವರೂ ಕೂಡಾ ಕಾರಣರಾಗುತ್ತಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ನ.ಪಂ ಉಪಾಧ್ಯಕ್ಷ ಜಗದೀಶ್ ಡಿ, ಮಾಜಿ ಜಿ.ಪಂ ಸದಸ್ಯ ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.