HomePage_Banner_
HomePage_Banner_
HomePage_Banner_

ಮಾವಿನಕಟ್ಟೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೆಬ್ಬಲಸು ಮರ

ಮಾವಿನಕಟ್ಟೆ: ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ರಸ್ತೆಯ ಮಾವಿನಕಟ್ಟೆ ಪಿಂಡಿವನ ಎಂಬಲ್ಲಿ ಹೆಬ್ಬಲಸು ಮರವೊಂದು ದರೆಗೆ ಉರುಳುವ ಸ್ಥಿತಿಯಲ್ಲಿದೆ. ಈ ಬೃಹತ್ ಹೆಬ್ಬಲಸು ಮರ ಉರುಳಿದರೆ ರಾಜ್ಯ ರಸ್ತೆ ಬಂದ್ ಆಗುತ್ತದೆ. ವಿದ್ಯುತ್ ತಂತಿ ಕಂಬದ ಮೇಲೆ ಬೀಳುವ ಸ್ಥಿತಿಯಲ್ಲಿದೆ. ಇದರ ಮೇಲೆ ಬಿದ್ದರೆ 10 ವಿದ್ಯುತ್ ಕಂಬ ಧರೆಗೆ ಉರುಳುವುದು ಖಂಡಿತ. ಇಂತಹ ಅಪಾಯದಲ್ಲಿರುವ ಮರವನ್ನು ತೆರವು ಗೊಳಿಸಲು ಮೆಸ್ಕಾಂ ಇಲಾಖೆಗೆ ತಿಳಿಸಿದರೂ ಅಸಡ್ಡೆಯಾಗಿ ಮಾತನಾಡು ವುದು ಗಮನಕ್ಕೆ ಬಂದಿದೆ. ರಸ್ತೆಗೆ ಮಣ್ಣು ಹಾಕಲು ಮರದ ಬುಡದಿಂದ ಮಣ್ಣನ್ನು ತೆಗೆಯಲಾಗಿದ್ದು. ರಾಜ್ಯ ಹೆದ್ದಾರಿಯಾಗಿದ್ದರಿಂದ ಈ ಮಾರ್ಗವಾಗಿ ಸಾವಿರಾರು ವಾಹನಗಳು ಚಲಿಸುತ್ತಿವೆ. ಮರ ಬಿದ್ದಲ್ಲಿ ಅನೇಕ ಅಪಘಾತಗಳು ಸಂಭವಿಸಲಿದೆ. ಕೂಡಲೇ ಅಪಾಯಕಾರಿ ಮರ ತೆರವುಗೊಳಿಸುವಂತೆ ಊರಿನವರು ಮನವಿ ಮಾಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.