HomePage_Banner_
HomePage_Banner_
HomePage_Banner_

“ಏಕರೂಪ ಶಿಕ್ಷಣ ನೀತಿ” ಜಾರಿಗೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

Advt_NewsUnder_1

ಬೆಳ್ತಂಗಡಿ: ಸರಕಾರಿ ಶಾಲೆಗಳು ಉಳಿಯಬೇಕಾದರೆ ಅಲ್ಲಿನ ಮೂಲಭೂತ ಸೌಕರ್ಯ ಮತ್ತು ವಾತಾವರಣ ಆಕರ್ಷಣೀಯವಾಗಿರಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವನ್ನೇ ಪಡೆದು ತಾಲೂಕಿನ 3 ಕಡೆ ಸರಕಾರಿ ಶಾಲೆಗಳನ್ನು ಐಖ್ಯಗೊಳಿಸಿ ಮಾದರಿಯಾಗಿ ರೂಪಿಸಬೇಕಂಬೆ ಇರಾದೆ ಇದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಹಿಂದೂ ಯುವ ಶಕ್ತಿ ಆಲಡ್ಕ ಮತ್ತು ರಾಜಕೇಸರಿ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಶಾಲೆಗಳ ಉಳಿವಿಗಾಗಿ “ಏಕರೂಪ ಶಿಕ್ಷಣ ನೀತಿ” ಜಾರಿಗೆ ಆಗ್ರಹಿಸಿ ಆ. 26 ರಂದು ಪುಂಜಾಲಕಟ್ಟೆಯಿಂದ ಬೆಳ್ತಂಗಡಿವರೆಗೆ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾ ಹಾಗೂ ಬೆಳ್ತಂಗಡಿ ನಗರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಟ್ವಾಳದ ದಡ್ಡಲಕಾಡು ಶಾಲೆಯನ್ನು ಮಾದರಿಯಾಗಿ ರೂಪಿಸಿದ ಪ್ರಕಾಶ್ ಆಂಚನ್ ಅವರ ಮಾರ್ಗದರ್ಶನದಲ್ಲಿ ನಮ್ಮ ತಾಲೂಕಿನಲ್ಲೂ ಈ ಕೆಲಸಕ್ಕೆ ಚಾಲನೆ ನೀಡಲಾಗುವುದು. ಶಿಕ್ಷಣ ಇಂದು ವ್ಯಾಪಾರವಾಗಿದೆ. ಬೆಳ್ತಂಗಡಿಯಲ್ಲೂ ಸಂಸ್ಥೆಯೊಂದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೊಳ್ಳಿ ಇಡುವ ಮತ್ತು ಸರಕಾರಿ ಮಾನ್ಯತೆ ಇಲ್ಲದೆ ಹಣ ಕೀಳುತ್ತಿದ್ದು ಅದನ್ನು ಓಡಿಸಲಾಗುವುದು ಎಂದರು.
ಪ್ರಸ್ತಾವನೆಗೈದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಅಧ್ಯಕ್ಷ ಪ್ರಕಾಶ್ ಅಂಚನ್, ಸರಕಾರಿ ಶಾಲೆ ಹೇಗೆ ಉಳಿಸಬಹುದು ಎಂದು ನಾವು ದಡ್ಡಲಕಾಡಿನಲ್ಲಿ ತೋರಿಸಿಕೊಟ್ಟಿದ್ದೇವೆ. ಕೇವಲ 30 ಮಕ್ಕಳಿದ್ದ ಶಾಲೆಗೆ ಸರಕಾರಿ ಮತ್ತು ಕಾರ್ಪೋರೆಟ್ ಅನುದಾನ ಇಲ್ಲದೆ 2.30 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದು ವಿದ್ಯಾರ್ಥಿಗಳ ಸಂಖ್ಯೆ 500ಕ್ಕೆ ಏರಿದೆ. ಮುಂದಿನ ಸಾಲಿಗೆ1 ಸಾವಿರ ಗುರಿ ಹೊಂದಿದ್ದೇವೆ ಎಂದರು.
ಸಭೆಯಲ್ಲಿ ಭಾಗಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಕ್ಷೇವಿಯರ್ ಪಾಲೇಲಿ, ಕಸಾಪ ಗೌರವ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಿಂದೂ ಯುವ ಶಕ್ತಿ ಆಲಡ್ಕ ಅಧ್ಯಕ್ಷ ರಮೇಶ್ ಹೆಗ್ಡೆ ಉಪಸ್ಥಿತರಿದ್ದರು. ಪ್ರಮುಖರಾದ ಚಿತ್ರನಟ ಸುಭಾಷ್ ಅಂಚನ್ ಸರಕಾರದ ಮುಂದಿರುವ ಬೇಡಿಕೆ ಮುಂದಿಟ್ಟರು. ದೇವದಾಸ್ ಸಲ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜಕೇಶರಿ ಬೆಳ್ತಂಗಡಿ ಸ್ಥಾಪಕಾಧ್ಯಕ್ಷ ದೀಪಕ್ ಜಿ ವಂದನಾರ್ಪಣೆಗೈದರು. ಪುಂಜಾಲಕಟ್ಟೆಯಲ್ಲಿ ಜಿ.ಪಂ ಸದಸ್ಯ ತುಂಗಪ್ಪ ಬಂಗೇರ ನಡಿಗೆಗೆ ಚಾಲನೆ ನೀಡಿದರು. ರಾಜಕೇಸರಿ ವತಿಯಿಂದ ಕುತ್ಯಾರು ದೇವಸ್ಥಾನದಿಂದ ಹೊರಟು ಪುಂಜಾಲಕಟ್ಟೆಯಿಂದ ಬೆಳ್ತಂಗಡಿ ವರೆಗೆ ಭಾಗವಹಿಸಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.