ನಾವೂರು ಗ್ರಾಮ ಪಂಚಾಯತ್ನ 2018-19ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಲಲಿತಾ ರವರ ಅಧ್ಯಕ್ಷತೆಯಲ್ಲಿ ಆ.23 ರಂದು ದ.ಕ.ಜಿ.ಪ.ಹಿ.ಪ್ರಾ ಶಾಲೆ ನಾವೂರಿನಲ್ಲಿ ಜರುಗಿತು.
ನೋಡೆಲ್ ಅಧಿಕಾರಿ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ, ಪಂಚಾಯತದ ಅಭಿವೃದ್ಧಿ ಅಧಿಕಾರಿ ಅಶೋಕ ದೇವಾಡಿಗ, ಕಾರ್ಯದರ್ಶಿ ಮೋನಮ್ಮ, ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಗೌಡ , ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.