ಪಶುಭಾಗ್ಯ, ಅಮೃತ ಯೋಜನೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಪಶು ಸಂಗೋಪನೆ ಇಲಾಖೆಯಲ್ಲಿ 2018-19 ನೇ ಸಾಲಿಗೆ ಅನುಷ್ಠಾನ ಗೊಳ್ಳುವ ಪಶುಭಾಗ್ಯ ಮತ್ತು ಅಮೃತ ಯೋಜನೆಗಳಿಗೆ ಸೆ.10 ರೊಳಗೆ ಅರ್ಜಿಗಳನ್ನು ಆಹ್ವಾನಸಲಾಗಿದೆ. ಪಶುಭಾಗ್ಯ ಯೋಜನೆಯಲ್ಲಿ ಸಣ್ಣರೈತ/ಅತೀ ಸಣ್ಣರೈತ ಅಥವಾ ಕೂಲಿ ಕಾರ್ಮಿಕರು, ಹಸುಘಟಕ, ಆಡುಘಟಕ, ಹಂದಿಘಟಕ, ಕೋಳಿ ಘಟಕಗಳಿಗೆ ಅರ್ಜಿ ಸಲ್ಲಿಸಬಹುದು. ಗಿರಿಜನ ಉಪಯೋಜನೆಯಡಿ ಹಸು ಘಟಕಗಳಿಗಾಗಿ ಪ.ಜಾತಿಯವರು ಅರ್ಜಿ ಸಲ್ಲಿಸಬಹುದು. ಎಸ್.ಟಿ ವಿಶೇಷ ಘಟಕ ಯೋಜನೆಯಲ್ಲಿ ಹಸು ಘಟಕಗಳಿಗಾಗಿ ಗಿರಿಜನರು ಅರ್ಜಿ ಸಲ್ಲಿಸುವ ಅವಕಾಶವಿದೆ.
ಪಶುಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸುವವರು ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಸುಸ್ಥಿದಾರರಾಗಿರಬಾರದು. ಈ ಬಗ್ಗೆ ಅರ್ಜಿ ನಮೂನೆಯಲ್ಲಿ ಧೃಢೀಕರಣ ಲಗತ್ತಿಸಬೇಕು. ಎಲ್ಲಾ ಅರ್ಜಿಗಳನ್ನು ಸ್ಥಳೀಯ ಪಶುವೈದ್ಯ ಸಂಸ್ಥೆಗಳ ಮೂಲಕ ಸಲ್ಲಿಸಬೇಕು. ಅರ್ಜಿಗಳ ಸ್ವೀಕಾರ ಬಳಿಕ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕಿಗೆ ನಿಗದಿಗೊಳಿಸಿದ ಗುರಿಗಳ ಅನುಸಾರವಾಗಿ ಆಯ್ಕೆ ಮಾಡಲಾಗುವುದು. ಈ ಹಿಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದೇ ಇರುವ ಫಲಾನುಭವಿಗಳು ಈಗ ಪುನಃ ಹೊಸ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.