ಬೆನಕ ಆಸ್ಪತ್ರೆ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾನವತಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ:  ಸ್ವಾತಂತ್ರ್ಯ ಎಂದರೆ ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದು. ರಕ್ತದೊತ್ತಡ ಇದೆ ಎಂದರೆ ತುಂಬಾ ಗಾಬರಿ ಪಡಬೇಕಾದ ಅಂಶವಲ್ಲ. ನಮ್ಮ ದೈನಂದಿನ ಜೀವನವನ್ನು ಒಂದಿಷ್ಟು ಶಿಸ್ತುಬದ್ಧಗೊಳಿಸಿದರೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಉಚಿತ ರಕ್ತದೊತ್ತಡ ತಪಾಸಣಾ ಯೋಜನೆಯು ಜನರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಅನಾರೋಗ್ಯದ ಬಗ್ಗೆ ಭಯ ಪಡುವ ಬದಲು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿಕೊಂಡಾಗ ಮುಂಜಾಗರೂಕತ ಕ್ರಮಗಳನ್ನು ಕೈಗೊಳ್ಳಬಹುದು. ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಆಚರಿಸುವ ಇದೊಂದು ಅಭಿನಂದನೀಯ ಹಾಗೂ ಅನುಕರಣೀಯ ಕಾರ್ಯಕ್ರಮ ಎಂದು ಸ್ತ್ರೀ ರೋಗ ತಜ್ಞೆ ಡಾ.ಸ್ಮ್ರತಿ ಮರಾಠೆ ಅವರು ಶ್ಲಾಘಿಸಿದರು.
ಅವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಅನಾವರಣಗೊಳಿಸಿದ ಪ್ರತಿ ದಿನ ಬೆಳಿಗ್ಗೆ ಗಂಟೆ 9.00 ರಿಂದ 1.30 ರತನಕ ಹಾಗೂ ಸಾಯಂಕಾಲ ಗಂಟೆ 3.00 ರಿಂದ 6.00 ರ ತನಕ ಸಾರ್ವಜನಿಕ ಸೇವೆಗಾಗಿ ಉಚಿತ ಬಿ.ಪಿ.ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣರವರು ಸಾರ್ವಜನಿಕರು ರಕ್ತದೊತ್ತಡದ ಬಗ್ಗೆ ತಿಳಿದು ದೀರ್ಘ ಹಾಗೂ ಆರೋಗ್ಯ ಪೂರ್ಣ ಜೀವನದೊಂದಿಗೆ ಬದುಕಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ನಮ್ಮ ಕಾಳಜಿಗೆ ಅನುಗುಣವಾಗಿ ಈ ಕಾರ್ಯಕ್ರಮ ಎಂದು ತಿಳಿಸಿದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ನಿರ್ವ”ಸಿದ ಕಾರ್ಯಕ್ರಮದಲ್ಲಿ ಡಾ.ಭಾರತಿ ಗೋಪಾಲಕೃಷ್ಣ ಹಾಗೂ ಉಜಿರೆ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಚನಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆನಕ ಆಸ್ಪತ್ರೆ ವತಿಂದ ಸ್ವಾಂತ್ರ್ಯೋತ್ಸವದ ಕೊಡುಗೆಯಾಗಿ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಕ್ಕಳ ಆರೋಗ್ಯ ರಕ್ಷಣೆಗೆ ಅನುಕೂಲಕರವಾದ ನೆಬ್ಯುಲೈಸರ್ ಯಂತ್ರವನ್ನು ಉಚಿತವಾಗಿ ಹಸ್ತಾಂತರಿಸಲಾತು. ಸ್ವಾತಂತ್ರ್ಯೋತ್ಸವದಂದು ಸುಮಾರು 89 ಜನ ಸಾರ್ವಜನಿಕರು ಉಚಿತವಾಗಿ ಬಿ.ಪಿ.ತಪಾಸಣೆಯನ್ನು ಮಾಡಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.