ಆಲಡ್ಕ: ಕುಸಿಯುವ ಭೀತಿಯಲ್ಲಿ ವಿದ್ಯುತ್ ಕಂಬ.

Advt_NewsUnder_1
Advt_NewsUnder_1

ಆಲಡ್ಕ: ಇಲ್ಲಿಯ ಆಲಡ್ಕದಿಂದ ಬಿಕ್ಕಿರೆ ರಸ್ತೆಯ ಬದಿಯಲ್ಲಿರುವ ವಿದ್ಯುತ್‌ಕಂಬ ವಾಲಿ ನಿಂತಿದ್ದು, 15 ದಿನಗಳ ಹಿಂದೆ ಲೈನ್‌ಮ್ಯಾನ್‌ಗಳಿಗೆ ತಿಳಿಸದರೂ ಗಮನಹರಿಸದ ಮೆಸ್ಕಾಂ ಇಲಾಖೆ. ಈ ರಸ್ತೆಯಲ್ಲಿ 40ಕ್ಕೂ ಮಿಕ್ಕಿದ ಮನೆಗಳಿದ್ದು, ಶಾಲಾ ಮಕ್ಕಳು ಇದೇ ರಸ್ತೆ ಬಳಸಿ ನಡೆದುಕೊಂಡು ಬರುತ್ತಾರೆ. ಅಪಘಾತವಾಗುವ ಮೊದಲು ಗಮನ ಸೆಳೆದರೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸದೆ ಅಪಘಾತದದ ಬಳಿಕ ಪಶ್ಚಾತಾಪ ಪಡುವಂತಾಗಿದೆ. ಅನೇಕ ಗ್ರಾಮಸಭೆಯಲ್ಲಿ ವಿದ್ಯುತ್ ಕಂಬ ಮತ್ತು ವಿದ್ಯುತ್ ತಂತಿಗಳ ಮೇಲಿರುವ ಮರಗಳ ಗೆಲ್ಲು ಕಡಿಯಲು ತಿಳಿಸದರೂ, ಮೆಸ್ಕಾಂ ಅಧಿಕಾರಿಗಳು ಉಡಾಫೆ ಉತ್ತರ ನೀಡುವುದು ಸರ್ವೇ ಸಾಮಾನ್ಯವಾಗಿದೆ. ಇದು ಯಾವಾಗ ಪರಿಹಾರವಾಗುತ್ತದೋ ಕಾದು ನೋಡಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.