ಮಡಂತ್ಯಾರು ರಿಕ್ರಿಯೇಷನ್ ಕ್ಲಬ್ ದಾಳಿ ಅಸಲಿ: ಎಸ್ಪಿ ಸ್ಪಷ್ಟನೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಮಡಂತ್ಯಾರು ರಿಕ್ರಿಯೇಷನ್ ಕ್ಲಬ್ ಮೇಲೆ ಜೂ. 26 ರಂದು ಡಿಸಿಐಬಿ ಇನ್ಸ್‌ಪೆಕ್ಟರ್ ಸುನಿಲ್ ವೈ ನಾಯ್ಕ್ ಮತ್ತು ತಂಡದವರು ನಡೆಸಿದ ದಾಳಿ ವರದಿಯನ್ನು ಕೆಲ ದೃಶ್ಯ ಮಾಧ್ಯಮಗಳು ನಕಲಿ ದಾಳಿ ಎಂದು ವರದಿ ಪ್ರಕಟಿಸಿದ್ದು,ಈ ಬಗ್ಗೆ ಎಸ್.ಪಿ ಡಾ. ರವಿಕಾಂತೇ ಗೌಡ ರವರು ಸ್ಪಷ್ಟನೆ ನೀಡಿದ್ದು, ಇಲಾಖೆ ನಡೆಸಿದ್ದು ಅಸಲಿ ದಾಳಿ ಎಂದಿದ್ದಾರೆ.
ಸದ್ರಿ ದಾಳಿಯ ವೇಳೆ ಅನುಸರಿಸಬೇಕಾದ ಎಲ್ಲಾ ಕಾನೂನು ಕಟ್ಟಳೆಗಳನ್ನು ದಾಳಿ ತಂಡ ಮಾಡಿಕೊಂಡಿತ್ತು. ಬಂಟ್ವಾಳ ಉಪವಿಭಾಗದ ಎಎಸ್‌ಪಿ ಸೋನವನೆ ರಿಷಿಕೇಶ್ ಭಗವಾನ್ ಐಪಿಎಸ್ ರವರಿಂದ ಸರ್ಚ್ ವಾರಂಟ್ ಪಡೆದುಕೊಳ್ಳಲಾಗಿತ್ತು. ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಿಂದ ಅನುಮತಿ ಪಡೆಯಲಾಗಿತ್ತು. ಡಿಸಿಐಬಿ ಪೊಲೀಸರು ಪುಂಜಾಲಕಟ್ಟೆ ಠಾಣಾ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಆಧಾರ ರಹಿತವಾದುದು ಎಂದು ಸ್ಪಷ್ಟಪಡಿಸಿದ್ದಾರೆ.
ಮಡಂತ್ಯಾರಿನ ಎಂ. ಆರ್ ರಿಕ್ರಿಯೇಷನ್ ಕ್ಲಬ್ ಎಂದು ಪರವಾನಿಗೆ ಪಡೆದು ಅಕ್ರಮವಾಗಿ ಜೂಜಾಟ ನಡೆಸಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಮುಂದಕ್ಕೂ ಇಂತಹಾ ಸ್ಕಿಲ್ ಗೇಮ್, ವೀಡಿಯೋ ಗೇಮ್ ಪರವಾನಿಗೆ ಪಡೆದು ಅಕ್ರಮ ಜೂಜಾಟ ಮಾಡುವವರ ಮೇಲೆ ಪರಿಣಾಮಕಾರಿಯಾಗಿ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.