ಮಿತ್ತಬಾಗಿಲು ಗ್ರಾಮಸಭೆ: ಗುತ್ತು,ಕಲ್ಲಂಡ,ಎರ್ಮಾಯಿ ರಸ್ತೆ ಅಭಿವೃದ್ಧಿಗೆ ನಿರ್ಣಯ.

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮ ಪಂಚಾಯತದ 2018-19ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯನ್ನು ಗ್ರಾಮ ಪಂಚಾಯತು ಕಛೇರಿ ಆವರಣದಲ್ಲಿ ಆ.1 ರಂದು ಗ್ರಾ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರವಾಸಿ ತಾಣ ಎರ್ಮಾಯಿ ಜಲಪಾತಕ್ಕೆ ಸರ್ವಋತು ಸಂಪರ್ಕ ರಸ್ತೆಗಾಗಿ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದರು. ವಾದ ಚರ್ಚೆಗಳು ನಡೆದು ಕಡೆಗೆ ಅಧ್ಯಕ್ಷರಿಂದ ನಿರ್ಣಯಕ್ಕೆ ಒಪ್ಪಿಗೆ ಪಡೆಯಲಾಯಿತು. ಕೊಲ್ಲಿ ಅಂಗನವಾಡಿ ಕಾರ್ಯಕರ್ತೆಯ ಅವ್ಯವಹಾರದ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿ, ಮಿತ್ತಬಾಗಿಲು ವ್ಯಾಪ್ತಿಯೊಳಗೆ ಎಲ್ಲಿಯೂ ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಮಲವಂತಿಗೆ-ಎಳನೀರು-ಸಂಸೆರಸ್ತೆ ಅಭಿವೃದ್ಧಿಗಾಗಿ ಒತ್ತಾಯ ಹಾಗೂ ಇಲಾಖಾಧಿಕಾರಿಗಳಿಂದ ಇಲಾಖೆಗಳ ಮಾಹಿತಿ ನೀಡಲಾಯಿತು.
ಪಂಚಾಯತು ಅಭಿವೃದ್ಧಿ ಅಧಿಕಾರಿಯವರು ಸ್ವಾಗತಿಸಿ, ಕಾರ್ಯದರ್ಶಿ ವರದಿ ಮಂಡಿಸಿದರು. ಆಗಸ್ಟ್ 15 ರಂದು ಕೊಲ್ಲಿ ಕಾಜೂರು ರಸ್ತೆಗೆ ಸಂಪರ್ಕ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ ನಡೆಯಲಿದೆ ಎಂದು ಗ್ರಾಮಸಭೆಯಲ್ಲಿ ಪ್ರಸ್ತಾಪ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.