HomePage_Banner_
HomePage_Banner_
HomePage_Banner_

ಬೆಳಾಲು ಗ್ರಾಮಸಭೆ.

ಬೆಳಾಲು: ಬೆಳಾಲು ಗ್ರಾಮ ಪಂಚಾಯತ್‌ನ 2018-19 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಜು.26 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕೋಟ್ಯಾನ್‌ರವರ ಅಧ್ಯಕ್ಷತೆಯಲ್ಲಿ ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಸಭೆಯನ್ನು ನಡೆಸಿಕೊಟ್ಟರು. ಜಿ.ಪಂ. ಸದಸ್ಯ ಕೊರಗಪ್ಪ ನಾಕ, ಗ್ರಾ.ಪಂ. ಉಪಾಧ್ಯಕ್ಷೆ ಜಯಲಕ್ಷ್ಮಿ, ಪಂಚಾಯತ್ ಸದಸ್ಯರುಗಳು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
ವಸತಿ ರಹಿತರಿಗೆ ಜಾಗ ನೀಡುವ ಕುರಿತು ಮನವಿ ಸಲ್ಲಿಸಿದರೂ ಸದ್ರಿ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸಿ ಅರ್ಹರಿಗೆ ವಿಂಗಡಿಸಿಕೊಡಬೇಕು. ಜಾಗ ಇದ್ದವರೂ ಅನಧಿಕೃತವಾಗಿ ಕಟ್ಟಿರುವ ಕಟ್ಟಡ ತೆರವುಗೊಳಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಪಂಚಾಯತ್ ವ್ಯಾಪ್ತಿಯ ರಸ್ತೆಗಳು ಈ ಬಾರಿಯ ವಿಪರಿತ ಮಳೆಯಿಂದಾಗಿ ಹಾಳಾಗಿದ್ದು ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಬದಿಯ ಚರಂಡಿ ದುರಸ್ಥಿ ಮಾಡಲು ಎಲ್ಲರೂ ಸಹಕಾರ ನೀಡುವಂತೆ ಅಧ್ಯಕ್ಷರು ಕೇಳಿಕೊಂಡರು. ಉಜಿರೆ-ಬೆಳಾಲು ರಸ್ತೆಯೂ ತೀರಾ ಹದಗೆಟ್ಟಿದ್ದು ಈ ರಸ್ತೆಯ ಚರಂಡಿ ರಿಪೇರಿ ಮಾಡುವಂತೆ ಸಂಬಂಧಪಟ್ಟವರಿಗೆ ಬರೆದು ಕೊಳ್ಳುವುದಾಗಿ ನಿರ್ಣಯಿಸಲಾಯಿತು.
ಕೊಲ್ಪಾಡಿ ಕಡೆಗೆ ಕುಡಿಯುವ ನೀರಿನ ಸರಬರಾಜು ಸರಿಯಾಗಿ ಬರುವುದಿಲ್ಲ. ಸೂಕ್ತ ವ್ಯವಸ್ಥೆಯೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ಪೈಪುಲೈನ್ ಕೊಲ್ಪಾಡಿ ದೇವಸ್ಥಾನ ರಸ್ತೆಗೆ ವಿಸ್ತರಿಸಬೇಕು. ಮಾಯಾ ಪರಿಸರದಲ್ಲಿ ವಿಪರಿತ ಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗಿರುತ್ತದೆ. ರಸ್ತೆ ಬದಿಯಲ್ಲಿರುವ ಮರಗಳನ್ನು ಸೂಕ್ತ ಸಮಯದಲ್ಲಿ ತೆಗೆದರೆ ಇಂತಹ ಸಮಸ್ಯೆ ಕಡಿಮೆಯಾಗಬಹುದು. ಈ ಬಗ್ಗೆ ಅರಣ್ಯ ಇಲಾಖೆಯವರು ಸ್ಪಂದಿಸಿ ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಇದರಿಂದ ಮೆಸ್ಕಾಂ ಇಲಾಖೆಗೆ ಆಗುವ ಹೆಚ್ಚಿನ ನಷ್ಟವನ್ನು ಕಡಿಮೆ ಮಾಡಬಹುದು.
ಮಾಯಾ ಪರಿಸರದಲ್ಲಿ ನೂತನ ವಿದ್ಯುತ್ ಪರಿವರ್ತನ ಅಳವಡಿಸಬೇಕು. ಹಾಗೂ ಸಾರ್ವಜನಿಕ ಕುಡಿಯುವ ನೀರಿಗಾಗಿ ಹಾಕಿರುವ ವಿದ್ಯುತ್ ಪರಿವರ್ತನೆಯಿಂದ ಮನೆಗಳಿಗೆ ವಿದ್ಯುತ್ ನೀಡುವುದು ಸರಿಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕೆಂದು ಊರವರು ಒತ್ತಾಯಿಸಿದಾಗ ಇರುವ ಶೌಚಾಲಯವನ್ನು ಉಪಯೋಗಿಸಿ ಸ್ವಚ್ಛವಾಗಿ ಊರವರು ಇಟ್ಟುಕೊಳ್ಳಬೇಕು. ಆಗಿದ್ದರೆ ಶೌಚಾಲಯ ವ್ಯವಸ್ಥೆ ಮಾಡುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ತಿಳಿಸಿದರು.
ಶಾಲೆಗಳಿಗೆ ಬಿಸಿಯೂಟಕ್ಕೆ ನೀಡಲಾಗುತ್ತಿರುವ ಅಕ್ಕಿಯ ಗುಣಮಟ್ಟ ಸರಿ ಇಲ್ಲ. ಇಂತಹ ಕಳಪೆ ಅಕ್ಕಿಯಿಂದ ಆರೋಗ್ಯಕ್ಕೆ ತೊಂದರೆಯಾಗಬಹುದು. ಮಕ್ಕಳಿಗೆ ನೀಡುವ ಇಂತಹ ಅಕ್ಕಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ ಮದ್ಯ ಮಾರಾಟ ಗ್ರಾಮದಲ್ಲಿ ಇದ್ದು, ಈ ಬಗ್ಗೆ ಸೂಕ್ತ ವ್ಯವಸ್ಥೆ ಅಬಕಾರಿ ಇಲಾಖೆಯವರು ಮಾಡಬೇಕು. ಹಾಗೂ ವಾರ್ಡ್ ಸಭೆಗಳಲ್ಲಿ ಬಂದ ಕಾಮಗಾರಿ ಬಗ್ಗೆ ಚರ್ಚಿಸಲಾಯಿತು. ಇನ್ನಿತರ ಅಭಿವೃದ್ಧಿ ಬಗ್ಗೆ ಗ್ರಾಮಸ್ಥರು ಸಭೆಗೆ ತಿಳಿಸಿದರು. ಅನಂತರ ವಿವಿಧ ಇಲಾಖಾಧಿಕಾರಿಗಳಿಂದ ಇಲಾಖಾ ಮಾಹಿತಿ ನೀಡಿದರು.
ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಮಾತನಾಡುತ್ತಾ, ಬೆಳಾಲು ಗ್ರಾಮದಲ್ಲಿ ಜಿ.ಪಂ. ವತಿಯಿಂದ ಆರೋಗ್ಯ ಕೇಂದ್ರದ ಕಂಪೌಂಡ್, ಶಾಲಾ ಪೀಠೋಪಕರಣ, ರಸ್ತೆ ಕಾಂಕ್ರಿಟೀಕರಣ, ಅಂಗನವಾಡಿಗಳಿಗೆ ಅನುದಾನ ನೀಡಲಾಗಿದೆ ಎಂದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಸ್ವಾಗತಿಸಿ ವರದಿ ವಾಚಿಸಿದರು. ಗುಮಾಸ್ತೆ ವಿಮಲ ವಾರ್ಡ್ ಸಭೆಯಲ್ಲಿ ಬಂದ ಕಾಮಗಾರಿಗಳ ವಿವರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.