ಅಪಘಾತವೆಸಗಿ ಮಾನಭಂಗಕ್ಕೆ ಯತ್ನ: ಆರೋಪಿ ಬಂಧನ.

Advt_NewsUnder_1
Advt_NewsUnder_1
Advt_NewsUnder_1
ಆರೋಪಿ ಥಾಮಸ್

ನೆರಿಯ: ಇಲ್ಲಿಯ ಗಂಡಿಬಾಗಿಲಿನ ಯುವತಿಯರಿಬ್ಬರು ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಮುಕನೊಬ್ಬ ಅಪಘಾತವೆಸಗಿ ಮಾನಭಂಗಕ್ಕೆ ಯತ್ನಿಸಿದ ಘಟನೆಯೊಂದು ಜು.30 ರಂದು ಸಂಜೆ ನಡೆದಿದೆ.

ಯುವತಿಯರಿಬ್ಬರು ಕೆಲಸ ಮುಗಿಸಿಕೊಂಡು ಉಜಿರೆಯಿಂದ ಗಂಡಿಬಾಗಿಲಿನಲ್ಲಿರುವ ತಮ್ಮ ಮನೆಗೆ ಪರಿಚಯಸ್ಥರೋರ್ವರ ಅಟೋ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ, ಆರೋಪಿ ಥಾಮಸ್ ಎಂಬವರು ಅವರನ್ನು ತಮ್ಮ ಪಿಕ್ ಅಪ್ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು, ಸಿಯೋನ್ ಆಶ್ರಮದ ಬಳಿ ಹಿಂದಿನಿಂದ ಆಟೋ ರಿಕ್ಷಾಕ್ಕೆ ಡಿಕ್ಕಿಹೊಡೆದ ಪರಿಣಾಮ ಎರಡೂ ವಾಹನಗಳು ಮಗುಚಿ ಬಿದ್ದಿದೆ. ಆ ಸಂದರ್ಭದಲ್ಲಿ ಆರೋಪಿ ಥಾಮಸ್ ರವರು ಯುವತಿಯು ತನ್ನನ್ನು ಪ್ರೀತಿಸುತ್ತಿಲ್ಲ ಎಂಬ ಕಾರಣದಿಂದ  ಆ ಯುವತಿಯರಿಬ್ಬರ ಜೊತೆ ಅನುಚಿತವಾಗಿ ವರ್ತಿಸಿ, ಮಾನಭಂಗಕ್ಕೆ ಯತ್ನಿಸುವ ಕೃತ್ಯ ವೆಸಗಿದ್ದಾನೆ.

ಯುವತಿ ಮತ್ತು ರಿಕ್ಷಾ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂದರ್ಭ ಸುದ್ದಿ ತಿಳಿದು ನೂರಾರು ಮಂದಿ ಜಮಾಯಿಸಿದ್ದು ಆರೋಪಿಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸಂಘಟನೆಗಳು ಪ್ರತಿಭಟನೆ ನೇತೃತ್ವ ವಹಿಸಿದ್ದರಿಂದ ಬಿಗು ಪರಿಸ್ಥಿತಿ ಉಂಟಾಗಿತ್ತು. ಶಾಸಕ ಹರೀಶ್ ಪೂಂಜರವರು ಸಂತ್ರಸ್ತರನ್ನು ಭೇಟಿಯಾಗಿ ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ  ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ| ರವಿಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಜೀತ್ ಮತ್ತು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿರವರ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.