ಬೆಳಾಲು ಶ್ರೀರಾಮ ಕ್ಷೇತ್ರ ಸಮಿತಿಯಿಂದ ಧರ್ಮಸಂಸದ್ ಸಮಾಲೋಚನಾ ಸಭೆ.

ಬೆಳಾಲು: ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಬೆಳಾಲು ಇದರ ಆಶ್ರಯದಲ್ಲಿ ಬೆಳಾಲು ಅನಂತೋಡಿ ಭಜನಾ ಮಂದಿರದಲ್ಲಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವದ ಅಂಗವಾಗಿ ಸೆ.3 ರಂದು ನಡೆಯುವ ರಾಷ್ಟ್ರೀಯ ಧರ್ಮಸಂಸದ್ ಅಂಗವಾಗಿ ಭಕ್ತಾದಿಗಳ ಸಮಾಲೋಚನಾ ಸಭೆ ಜು.29 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಧರ್ಮಸಂಸದ್ ತಾಲೂಕು ಪ್ರಧಾನ ಸಂಚಾಲಕ ಸಂಪತ್ ಸುವರ್ಣ ಆಗಮಿಸಿ, ಕಾರ್ಯಕ್ರಮದ ವಿವರ ನೀಡಿ 2000ಕ್ಕೂ ಮಿಕ್ಕಿ ಸಾಧು ಸಂತರು ಆಗಮಿಸಲಿರುವ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿನಂತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಾಲು ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪ್ರಧಾನ ಸಂಚಾಲಕ ಗ್ರಾ.ಪಂ ಸದಸ್ಯ ಸುರೇಂದ್ರ ಗೌಡ .ಎಸ್ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.
ಸಭೆಯಲ್ಲಿ ಧರ್ಮಸಂಸದ್ ಧರ್ಮಸ್ಥಳ ವಲಯ ಸಂಚಾಲಕ ಹರೀಶ್ ಸುವರ್ಣ ಕನ್ಯಾಡಿ, ಬೆಳಾಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ನಾಣ್ಯಪ್ಪ ಪೂಜಾರಿ, ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಎನ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಯಶವಂತ ಬನಂದೂರು, ಬೆಳಾಲು ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಗ್ರಾ.ಪಂ ಸದಸ್ಯರಾದ ಸತೀಶ್ ಗೌಡ ಎಳ್ಳುಗುಡ್ಡೆ, ದಯಾನಂದ.ಪಿ, ಶ್ರೀಮತಿ ವಿಮಲ, ಮಾಜಿ ಸದಸ್ಯ ಶಿವಪ್ರಸಾದ್.ಕೆ, ಶಿಲ್ಪಿ ಶಶಿಧರ ಆಚಾರ್ಯ, ಮಾಯಾ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಗಂಗಾಧರ ಸಾಲಿಯಾನ್, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಸೇಸಪ್ಪ ಪೂಜಾರಿ ಉಪ್ಪಾರು, ಗೌರವಾಧ್ಯಕ್ಷ ರಮೇಶ ಪೂಜಾರಿ ಗುಂಡ್ಯ, ಯುವವಾಹಿನಿ ಸಂಚಲನಾ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಸೇವಾಪ್ರತಿನಿಧಿ ಕು| ಆಶಾ, ಬಿಲ್ಲವ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ಶ್ರೀಮತಿ ವೇದಾ, ಯುವಬಿಲ್ಲವ ವೇದಿಕೆ ಅಧ್ಯಕ್ಷ ಅವಿನಾಶ್, ಮಾಜಿ ಅಧ್ಯಕ್ಷ ದಾಮೋದರ, ಕಾರ್ಯದರ್ಶಿ ಪ್ರವೀಣ್ ಸಫಲ್ಯ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದು , ಸಲಹೆ ಸೂಚನೆ ನೀಡಿದರು.
ಬೆಳಾಲು ಶ್ರೀರಾಮ ಕ್ಷೇತ್ರ ಸಮಿತಿಯ ಅಧ್ಯಕ್ಷ ಜಾರಪ್ಪ ಪೂಜಾರಿ ಪ್ರಸ್ತಾವಿಸಿ, ಯುವ ಬಿಲ್ಲವ ವೇದಿಕೆಯ ತಾ| ಅಧ್ಯಕ್ಷ ಸಂತೋಷ್ ಉಪ್ಪಾರು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.