ಉಜಿರೆಯಲ್ಲಿ ತುಳುನಾಡ ಆಷಾಢ ವೈಭವ ಸಂಭ್ರಮ.

ಉಜಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಜು. 28 ರಂದು   ತುಳುನಾಡ ಆಷಾಢ ವೈಭವ  ಕಾರ್ಯಕ್ರಮ ಜರುಗಿತು. ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ವಹಿಸಿದ್ದರು.
ನಿವೃತ ಶಿಕ್ಷಕ ರಘುನಾಥ ರೈ ಉಜಿರೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದು ಶುಭ ಕೋರಿದರು.
ಸಮಾರಂಭದ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಮೇದಿನಿ ಡಿ ಗೌಡ, ಜೇಸಿಐ ಉಜಿರೆ ಅಧ್ಯಕ್ಷ ವಿಜಯೇಂದ್ರ ದೇವಾಡಿಗ, ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳೆಂಜ, ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಪ್ರಸಾದ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಡಾ. ಶ್ರೀಧರ ಭಟ್ ಉಪಸ್ಥಿತರಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ಡಾ. ಮಾಧವ , ರಾಮಕೃಷ್ಣ ಭಟ್ ಚೊಕ್ಕಾಡಿ  ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶಂದ್ರ ಶೆಟ್ಟಿ ಬಳೆಂಜ , ಕೇಶವ ಭಟ್ ಅತ್ತಾಜೆ ,ಕಾರ್ಯದರ್ಶಿ ರಾಮಕೃಷ್ಣ ಎಸ್.ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಮಧ್ಯೆ ಚಿಕ್ಕಮೇಳದವರಿಗೆ ಯಕ್ಷಗಾನ ಪ್ರದರ್ಶನ, ಸಾಹಿತ್ಯ ಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ, ಪ್ರೌಢ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಭಿಸುವ ತುಳು ಗ್ರಾಮೀಣ ಕ್ರೀಡಾ ಸ್ಪರ್ಧೆಗಳಾದ ಚೆನ್ನಮಣೆ, ಬಿಲ್ಲೀಸ್, ಕಲ್ಲಾಟ, ತುಳು ಅಕ್ಷರ ಜೋಡಣೆ ಇತ್ಯಾಧಿ ಸ್ಪರ್ಧೆಗಳು ಸಂಪನ್ನಗೊಂಡವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.