ಮಾಜಿ ಶಾಸಕ ಬಂಗೇರ ರಿಂದ ನವೀನ್ ಕುಮಾರ್ ರಿಗೆ ವೈದ್ಯಕೀಯ ನೆರವು.

ಗೇರುಕಟ್ಟೆಯ ರಸ್ತೆ ಅಪಘಾತವೊಂದರಲ್ಲಿ ತಲೆಗೆ ತೀವ್ರ ರೀತಿಯ ಗಾಯಗೊಂಡು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ದಾಖಲಾಗಿರುವ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಮಠ ನಿವಾಸಿ, ದಲಿತ ಸಮುದಾಯದ ಡೀಕಯ್ಯರವರ ಪುತ್ರ ನವೀನ್ ಕುಮಾರ್(24.ವ) ಇವರ ಚಿಕಿತ್ಸೆಗಾಗಿ ಮಾಜಿ ಶಾಸಕ ವಸಂತ ಬಂಗೇರ 10 ಸಾವಿರ ರೂ. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಗಾಯಾಳುವಿನ ತಾಯಿ ಶ್ರೀಮತಿ ಜಾನಕಿಯವರನ್ನು ತನ್ನ ಕಚೇರಿಗೆ ಕರೆಸಿಕೊಂಡ ಮಾಜಿ ಶಾಸಕರು ಅವರ ಕೈಯ್ಯಲ್ಲಿ ಈ ನೆರವಿನ ಮೊತ್ತವನ್ನು ನೀಡಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು. ಈ ಸಂಧರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ಇದರ ಜಿಲ್ಲಾ ಪ್ರಧಾನ ಸಂಚಾಲಕ ಬಿ.ಕೆ ವಸಂತ್ ಬೆಳ್ತಂಗಡಿ, ಮೈಸೂರ ವಿಭಾಗೀಯ ಸಂಘಟನಾ ಸಂಚಾಲಕ ಚಂದು ಎಲ್,ನಲಿಕೆ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಪ್ರಭಾಕರ ಓಡಿಲ್ನಾಳ, ಕುವೆಟ್ಟು ಪಂಚಾಯತ್ ಸದಸ್ಯ ವೃಷಭ ಆರಿಗ, ದಸಂಸ ಪಾರೆಂಕಿ ಗ್ರಾಮ ಶಾಖೆಯ ಸಂಘಟನಾ ಸಂಚಾಲಕ ರಘು ಪಾರೆಂಕಿ ಇವರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.