ನಿವೃತ್ತ ಯೋಧ ಐ.ಎಂ. ಸುಬ್ರಮಣಿ ರವರಿಗೆ ಸನ್ಮಾನ

ಓಡಿಲ್ನಾಳ: ಸುಧೀರ್ಘ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಹೆಮ್ಮೆಯ ವೀರಯೋಧ ಐ.ಎಂ ಸುಬ್ರಮಣಿ ಹಾಗೂ ಅವರ ಪತ್ನಿ ಶ್ರೀಮತಿ ಪೊನ್ನಮ್ಮ ರವರನ್ನು ಕಾರ್ಗಿಲ್ ವಿಜಯ ದಿನಾಚರಣೆಯ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಬಳಂಜ, ಪೂವಾಧ್ಯಕ್ಷರಾದ ತುಕಾರಾಮ್.ಬಿ, ಸುಭಾಶ್ಚಂದ್ರ ಎಂ.ಪಿ, ನಾರಾಯಣ ಶೆಟ್ಟಿ, ಸದಸ್ಯರಾದ ಸ್ವರೂಪ್, ಶಿತಲ್ ಜೈನ್, ಪ್ರೀತಂ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.