ಮಡಂತ್ಯಾರು ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ ಮಾಣಿಂಜ ನಿಧನ.

Advt_NewsUnder_1
Advt_NewsUnder_1
Advt_NewsUnder_1

ಕುಕ್ಕಳ: ಶ್ರಮಜೀವಿ, ಪರೋಪಕಾರಿಯಾಗಿದ್ದು, ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದ ಕುಕ್ಕಳ ಗ್ರಾಮದ ಮಾಣಿಂಜ ರವೀಂದ್ರ ಪೂಜಾರಿ (83.ವ) ಅವರು ಇಂದು(  ಜು.25 )  ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಪ್ರಗತಿಪರ ಕೃಷಿಕರಾಗಿದ್ದ ಇವರು ಮಡಂತ್ಯಾರು ಮಂಡಲ ಪಂಚಾಯತು ಸದಸ್ಯರಾಗಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ನಿರ್ದೇಶಕರಾಗಿ, ಕುಕ್ಕುಳ ಗ್ರಾಮ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾಗಿ, ಮಡಂತ್ಯಾರು ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಉದ್ಯಮಿಯಾಗಿದ್ದ ಇವರು ಕೊಡುಗೈ ದಾನಿಯಾಗಿ, ಬಸವೇಶ್ವರ ದೇವಸ್ಥಾನದ ಸಮಿತಿ ಸದಸ್ಯರಾಗಿ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಶ್ರೀಮತಿ ರೇವತಿ, ಪುತ್ರರಾದ ಕರ್ಣೇಂದ್ರ ಹಾಗೂ ಸುನೀಂದ್ರ ಪುತ್ರಿಯರಾದ ಮಿತ್ರ ಮತ್ತು ಪೂರ್ಣಿಮ,ಕುಟುಂಬಸ್ಥರು, ಬಂಧು-ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.