ಗಾಂಧಿನಗರದಲ್ಲಿ ತಂಡದಿಂದ ಕೊಲೆ ಬೆದರಿಕೆ : 7 ಆರೋಪಿಗಳ ವಿರುದ್ಧ ಕೇಸು ದಾಖಲು.

ಉಜಿರೆ: ಎರಡು ತಂಡಗಳ ನಡುವೆ ಆಗಲಿದ್ದ ಜಗಳವನ್ನು ಬಿಡಸಲು ಹೋದ ವ್ಯಕ್ತಿಯೊಬ್ಬರ ಮೇಲೆ ವೈಷಮ್ಯ ಸಾಧಿಸಲು ಅವರ ಮನೆಯ ಬಳಿಗೆ ತಂಡ ಕಟ್ಟಿಕೊಂಡು ಬಂದ ಒಂದು ಗುಂಪು ಮನೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರೂ ಇರುವಂತೆಯೇ ತೀರಾ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಮಾತ್ರವಲ್ಲದೆ, ಮಾರಾಕಾಯುಧಗಳೊಂದಿಗೆ ಆಗಮಿಸಿ ಮನೆಯ ಕಡೆಗೆ ಕಲ್ಲು ಬಿಸಾಡಿ, ಮನೆ ಮಾಲಿಕರಿಗೆ ಕೊಲೆಬೆದರಿಕೆಯೊಡ್ಡಿದ ಘಟನೆ ಉಜಿರೆ ಗ್ರಾಮದ ಗಾಂಧಿನಗರ (ಕಕ್ಕೆಜಾಲು) ಎಂಬಲ್ಲಿ ಜು. 14 ರಂದು ನಡೆದಿದೆ.
ಈ ಸಂಬಂಧ 7 ಮಂದಿ ಆರೋಪಿಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ನಡಿ ಅಕ್ರಮ ಕೂಟ, ಅಕ್ರಮ ಪ್ರವೇಶ, ಗುಂಪುಕಟ್ಟಿಕೊಂಡು ಶಾಂತಿಭಂಗ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆಬೆದರಿಕೆಯೊಡ್ಡಿದ 504,506 ಸಹಿತದ ಸೆಕ್ಷನ್‌ಗಳಡಿ ಕೇಸು ದಾಖಲಾಗಿದೆ.
ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಸ್ಮಾರ್ಟ್ ಮೊಬೈಲ್ಸ್‌ನ ಇಲ್ಯಾಸ್, ಬಶೀರ್, ಅಬೂಬಕ್ಕರ್, ಅಸ್ಫಾನ್, ಅಶ್ಪಾಕ್, ಇದ್ರೀಸ್ ಬಾವಾ, ಶರೀಫ್ ಎಂಬವರೆಂದು ಗುರುತಿಸಲಾಗಿದೆ.
ಇಬ್ರಾಹೀಂ ಗಾಂಧಿನಗರ ಅವರು ನೀಡಿದ ದೂರಿನಂತೆ ಆರೋಪಿಳ ವಿರುದ್ಧ ಈ ಕಾನೂನು ಕ್ರಮ ಜರುಗಿದೆ. 9 ತಂಡಗಳ ಮಧ್ಯೆ ನಡೆಯಲಿದ್ದ ಜಗಳವನ್ನು ಇಬ್ರಾಹಿಂ ಅವರು ತಡೆದಿದ್ದು, ಅದೇ ದಿನ ಸಂಜೆ ಇಲ್ಯಾಸ್ ಅವರ ನೇತೃತ್ವದಲ್ಲಿ ತಂಡ ಕಟ್ಟಿಕೊಂಡು ಬಂದು ಇಬ್ರಾಹಿಂ ವಿರುದ್ಧ ಧ್ವೇಷ ಸಾಧಿಸಲು ಯತ್ನಿಸಿದ್ದಾರೆಂದು ಎಫ್‌ಐಆರ್‌ನಲ್ಲಿ ಉಲ್ಲೇಖವಿದೆ. ಇಬ್ರಾಹಿಂ ಅವರ ಮನೆಯ ಸಿಸಿ ಟಿವಿಯಲ್ಲಿ ಈ ಎಲ್ಲಾ ಘಟನೆಗಳು ದಾಖಲಾಗಿದ್ದು ಅದರ ಆಧಾರದ ಮೇಲೆ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಕಾಲೇಜು ವಿದ್ಯಾರ್ಥಿಯಾಗಿದ್ದು ಅವರಿಗೆ ಬುದ್ದಿವಾದ ಹೇಳಿ ಕಳುಹಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.