ಮೂಢನಂಬಿಕೆ ನಿಷೇಧವಾಗಿದ್ದರೂ ಮಹಿಳೆಯರ ನರಕಯಾತನೆ ಕೇಳುವವರ್‍ಯಾರು?!

ಪದ್ಮನಾಭ ವೇಣೂರು

ದೇಶ ತಂತ್ರಜ್ಞಾನ ದೊಂದಿಗೆ ವೈಜ್ಞಾನಿಕವಾಗಿ ವೇಗವಾಗಿ ಮುಂದುವರಿಯುತ್ತಿದೆ. ಅಲ್ಲದೆ 2017ರಲ್ಲಿ ಮೂಡನಂಬಿಕೆಗಳನ್ನು ನಿಷೇಧಿಸುವ ಮೌಢ್ಯ ನಿಷೇಧ ಕಾಯ್ದೆಯೂ ಜಾರಿಗೊಂಡಿದೆ. ಆದರೆ ಮೌಢ್ಯಾಚರಣೆ ಗಳು ಮಾತ್ರ ನಿಂತಿಲ್ಲ. ಗ್ರಾಮೀಣ ಪ್ರದೇಶಗಳ ಹಳ್ಳಿಗಳಲ್ಲಿ ಮೂಡನಂಬಿಕೆ ಆಳವಾಗಿ ಬೇರೂರಿ ಮೌಢ್ಯಾಚರಣೆಗಳು ಇನ್ನೂ ಜಾರಿಯಲ್ಲಿರುವುದು ಬೇಸರದ ಸಂಗತಿ.
ಹೌದು ಮಹಿಳೆಯರು ಋತುಮತಿ ಯಾದಾಗ, ಮುಟ್ಟಾ ದಾಗ, ಹೆರಿಗೆ ಸಂದರ್ಭಗಳಲ್ಲಿ ಮನೆಯಿಂದ ಹೊರಗೆ ಕೂರಿಸುವ ಅನಿಷ್ಠ ಪದ್ದತಿ ಇನ್ನೂ ಹಳ್ಳಿಪ್ರದೇಶಗಳಲ್ಲಿ ಜೀವಂತವಾಗಿದೆ.
ಮನೆಯಿಂದ ಹೊರಗೆ: ಸಾಧಾರಣ ವಾಗಿ ಋತುಮತಿ ಯಾದವರು ೧೨ ದಿನ, ಹೆರಿಗೆ ಬಳಿಕ ೧೫ ದಿನ ಹಾಗೂ ಮುಟ್ಟಾದಾಗ ೩ ದಿನ ಮನೆಯೊಳಗೆ ಪ್ರವೇಶಿಸುವಂ ತಿಲ್ಲ! ಮತ್ತೆ ಮನೆಯ ದೈವ, ದೇವರ ಕೋಣೆಗಳಿಗೆ ಪ್ರವೇಶಿಸಲು ಹಲವು ದಿನ ಕಾಯಬೇಕು. ಹಲವು ದಿನಗಳ ಕಾಲ ದೇವಸ್ಥಾನಗಳಿಗೆ ಭೇಟಿ ನೀಡುವಂತಿಲ್ಲ. ಎಷ್ಟೆದಂತೆ ಮುಟ್ಟಾದ ಸಂದರ್ಭ ಮನೆಯವರನ್ನಾಗಲಿ, ಇತರರನ್ನಾಗಿ ಮುಟ್ಟುವಂತಿಲ್ಲ, ಹೊರಗಡೆ ಹೋಗುವಂತಿಲ್ಲ. ಮನೆಯ ಹೊರಭಾಗದಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದ ಮನೆಗಳಲ್ಲಿ ಮಳೆ, ಬಿಸಿಲು, ಗಾಳಿ, ಚಳಿಯನ್ನು ಲೆಕ್ಕಿಸದೆ ಕಾಲ ದೂಡಬೇಕಾದ ಅನಿವಾರ್ಯತೆ ಮಹಿಳೆಯರದ್ದು.
ಆಳವಾಗಿ ಬೇರೂರಿದ ನಂಬಿಕೆ:
ಮುಟ್ಟಿನ ಅವಧಿಯಲ್ಲಿ ಮನೆಯೊಳಗೆ ಪ್ರವೇಶಿಸಿದರೆ ದೇವರ ಶಾಪಕ್ಕೆ ಗುರಿಯಾ ಗುತ್ತಾರೆಂಬ ನಂಬಿಕೆ ಜನರಲ್ಲಿದೆ. ಅಲ್ಲದೆ ಮನೆಯೊಳಗೆ ಪ್ರವೇಶಿಸಿದರೆ ಮನೆಯ ಇತರ ಸದಸ್ಯರಿಗೆ ಅನಾರೋಗ್ಯ, ಮನೆಗೆ ಹಾವು ಬರುವುದು ಸೇರಿದಂತೆ ವಿಚಿತ್ರ ಸಮಸ್ಯೆಗಳು ಕಾಡಲಿವೆ ಎಂಬ ಮೂಡನಂಬಿಕೆ ಜನರಲ್ಲಿ ಆಳವಾಗಿ ಬೇರೂರಿದೆ.
ಹಬ್ಬ ಹರಿದಿನದಂತಹ ವಿಶೇಷ ಸಂದರ್ಭಗಳಲ್ಲೂ ಮುಟ್ಟಾದರೆ ಹೆಣ್ಣು ಮಕ್ಕಳಿಗೆ ಮನೆಯೊಳಗೆ ಪ್ರವೇಶವಿಲ್ಲ. ಈ ಸಂಪ್ರದಾಯ ಮೊದಲಿನಷ್ಟು ಇಲ್ಲದಿದ್ದರೂ ಈಗಲೂ ಆಚರಣೆಯಲ್ಲಿ ರುವುದು ಬೇಸರದ ಸಂಗತಿ. ಹೆಣ್ಣನ್ನು ಶೋಷಣೆಗೆ ಈಡು ಮಾಡುವಂಥಹ ಇಂತಹ ಪದ್ದತಿ ಬಗ್ಗೆ ಸಮಾಜಸೇವಾ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ.
ಮೌಢ್ಯನಿಷೇಧ ಕಾಯ್ದೆ ಏನು ಹೇಳುತ್ತದೆ?: ಕರ್ನಾಟಕ ಮೌಢ್ಯ ನಿಷೇಧ ಕಾಯ್ದೆ ೨೦೧೭ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಅಂಗೀಕಾರ ಗೊಂಡಿದೆ.
ಇದರಂತೆ ಋತುಸ್ರಾವದ ಅವಧಿಯಲ್ಲಿ ಮಹಿಳೆಯರನ್ನು ಮನೆಯಿಂದ ದೂರ ಇರಿಸುವುದು ಹಾಗೂ ಈ ಅವಧಿಯಲ್ಲಿ ದೇವಸ್ಥಾನ ಗಳಿಗೆ ಪ್ರವೇಶ ನೀಡದಿರುವುದು ಅಪರಾಧ ಎನ್ನುತ್ತದೆ. ಆದರೆ ಇದನ್ನು ಪಾಲಿಸುವವರು ಯಾರು ಎಂಬುದು ಯಕ್ಷ ಪ್ರಶ್ನೆ.

ಅರ್ಥಹೀನವಾದದು
ನಿಜವಾಗಿಯೂ ಮುಟ್ಟು ಮುಟ್ಟಬಾರದ್ದಲ್ಲ. ವಿಶ್ರಾಂತಿ ಮತ್ತು ಸ್ವಚ್ಛತೆಯ ಸದುದ್ದೇಶದಿಂದ ಕೆಲವು ನಿಷೇಧ, ಕಟ್ಟುಪಾಡುಗಳು ಬೆಳೆದುಬಂದಿರಬಹುದು. ಇದಕ್ಕೆ ಜನರಲ್ಲಿ ಅರಿವು ಮೂಡಿಸುವುದೇ ಪರಿಹಾರ. ನೆಲವನ್ನು ಭೂದೇವಿ ಎನ್ನುತ್ತೇವೆ, ಅದನ್ನು ಮುಟ್ಟಬಾರದು ಎಂಬುದು ಎಷ್ಟು ಅರ್ಥಹೀನವೋ ಹಾಗೆಯೇ ಹೆಣ್ಣು ಮುಟ್ಟಾದಾಗ ಮನೆಯಿಂದ ಹೊರಗಿರಬೇಕು ಎಂಬ ಭಾವನೆಯೂ ಅರ್ಥಹೀನವಾದದು.
-ಡಾ| ಯೋಗೀಶ್ ಕೈರೋಡಿ, ಪ್ರಾಧ್ಯಾಪಕರು ಹಾಗೂ ಚಿಂತಕರು

ಇಂತಹ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ ಇದು ಸರಿಯಲ್ಲ. ದೈವ, ದೇವರ ಕೋಣೆಗೆ ಹೊರತುಪಡಿಸಿ ಇತರ ಕೋಣೆಗಳಿಗೆ ಪ್ರವೇಶಿಸುವಂತಾಗಬೇಕು. -ಮೀನಾಕ್ಷಿ, ನಾರಾವಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.