ವಿ.ಹಿಂ.ಪ ಪುತ್ತೂರು ಜಿಲ್ಲಾ ಪ್ರಚಾರ ಪ್ರಮುಖ್ ಆಗಿ ಬೆಳ್ತಂಗಡಿಯ ಸುಬ್ರಹ್ಮಣ್ಯ ಭಟ್ ನೆಕ್ಕಿಲೊಟ್ಟು.

ವಿಶ್ವ ಹಿಂದೂ ಪರಿಷತ್ ಇದರ ಸುಳ್ಯ, ಪುತ್ತೂರು, ಬೆಳ್ತಂಗಡಿ, ವಿಟ್ಲ, ಕಡಬ, ಬಂಟ್ವಾಳ ಹಾಗೂ ವೇಣೂರು ಪ್ರಖಂಡಗಳನ್ನೊಳಗೊಂಡ ಪುತ್ತೂರು ಜಿಲ್ಲಾ ಪ್ರಚಾರ ಪ್ರಮುಖ್ ಆಗಿ ಬೆಳ್ತಂಗಡಿಯ ನೆಕ್ಕಿಲೊಟ್ಟು ಸುಬ್ರಹ್ಮಣ್ಯ ಭಟ್ ನಿಯುಕ್ತಿಗೊಂಡಿದ್ದಾರೆ.
ಜು. 14-15 ರಂದು ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ಈ ಆಯ್ಕೆ ನಡೆದಿದೆ.
ನೆಕ್ಕಿಲೊಟ್ಟು ಸುಬ್ರಹ್ಮಣ್ಯ ಭಟ್ ಅವರು ಈ ಹಿಂದೆ ಸಂಘಟನೆಯ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷರಾಗಿದ್ದರು. ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷರಾಗಿರುವ ಅವರು ಉತ್ತಮ ಕೃಷಿಕರಾಗಿದ್ದು, ಬೆಳ್ತಂಗಡಿ ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.