ತಾಲೂಕಿನ ಜನತೆಗೆ ತಾಲೂಕು ಕಛೇರಿಯಲ್ಲಿ ಅನ್ಯಾಯವಾದರೆ ಸಹಿಸಲಾರೆ: ಪೂಂಜ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ತಾಲೂಕು ಕಚೇರಿಯಲ್ಲಿ ಜನತೆಯ ಕೆಲಸಕ್ಕೆ ಹತ್ತಾರು ಬಾರಿ ಕುಣಿಯುವಂತಹ ಸ್ಥಿತಿ ನಿರ್ಮಾಣವಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಇರುವ ಅಧಿಕಾರಿಗಳು ಜನತೆಯ ಜೊತೆ ಪ್ರಾಮಾಣಿಕವಾಗಿ ಸ್ಪಂದಿಸಲು ಪ್ರಯತ್ನಪಡಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ತಾಲೂಕು ಕಚೇರಿಗೆ ಪ್ರವೇಶ ನೀಡಬಾರದು ಎಂದು ಶಾಸಕ ಹರೀಶ್ ಪೂಂಜ ಸೂಚನೆ ನೀಡಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಜನತೆಗೆ ಕೆಲಸ ಆಗುತ್ತಿಲ್ಲ ಎಂಬ ದೂರು ಪದೇ ಪದೇ ಬರುತ್ತಿರುವುದರಿಂದ ಜು. 17 ರಂದು ಅವರು ದಿಢೀರ್ ತಾಲೂಕು ಕಚೇರಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿದ ಶಾಸಕರು, ಅವರ ಕಾರ್ಯವೈಖರಿಗೆ ಘರಂ ಆಗಿದ್ದರು.
ನಾನು ಎರಡು ಬಾರಿ ಕಚೇರಿಗೆ ಭೇಟಿ ನೀಡಿ ಪೂರ್ವ ಸೂಚನೆ ನೀಡಿದ ಬಳಿಕವೂ ಸುದಾರಣೆಯಾಗದ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. 94 ಸಿ ಯಡಿ ಬಡವರಿಗೆ ಭೂಮಿ ನೀಡಲು ಅವರಿಂದ ಲಂಚ ಪಡೆಯಲಾಗುತ್ತಿದೆ. ಅಕ್ರಮ ಸಕ್ರಮ ಫೈಲ್‌ಗಳು ಯಾರ್‍ಯಾರ ಮನೆಯಲ್ಲಿದೆ. ಜಾತಿ ಆದಾಯ ಪ್ರಮಾಣಪತ್ರಕ್ಕೂ ಸತಾಯಿಸಲಾಗುತ್ತಿದೆ ಎಂಬ ದೂರಿದೆ ಎಂದರು.
ಶಾಸಕರ ಭೇಟಿ ವೇಳೆ ಬೆಳಗ್ಗಿನ 10 ಗಂಟೆಯ ಕಚೇರಿ ಅವಧಿ ಪ್ರಾರಂಭವಾಗಿದ್ದು ಈ ವೇಳೆ ಇರುವ 35 ಸಿಬ್ಬಂದಿಗಳ ಪೈಕಿ ಕೇವಲ 10 ಜನ ಮಾತ್ರ ಹಾಜರಿದ್ದುದನ್ನು ಖಚಿತಪಡಿಸಿಕೊಂಡು, ಎಲ್ಲಾ ಸಿಬ್ಬಂದಿಗಳಿಗೆ ಹಾಜರಾತಿ ಪುಸ್ತಕ ಇಡುವಂತೆ ತಿಳಿಸಿದರು.
ಒಂದು ವೇಳೆ ಅವರು ತಡವಾಗಿ ಬಂದರೆ ರಜೆ ಎಂದು ಪರಿಗಣಿಸಿ ರಜೆ ನೋಟೀಸು ನೀಡುವಂತೆ ತಹಶಿಲ್ದಾರರಿಗೆ ಆದೇಶಿಸಿದರು.
ಯಾವುದೇ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ನಾನು ಒಪ್ಪುವುದಿಲ್ಲ. ಒಬ್ಬ ಸಿಬ್ಬಂದಿ ವರ್ಗಾವಣೆ ಬಯಸಿ ಪ್ರಯತ್ನ ಮಾಡುತ್ತಿರುವುದು ನನಗೆ ತಿಳಿದಿದೆ. ಎಲ್ಲಾ ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಯಾರನ್ನೂ ಇಲ್ಲಿಂದ ವರ್ಗಾವಣೆ ಮಾಡದಂತೆ ಸಚಿವರಿಗೂ ತಿಳಿಸಿದ್ದೇನೆ. ಇರುವ ಸಿಬ್ಬಂದಿಯನ್ನೇ ಹೇಗೆ ಕೆಲಸ ಮಾಡಿಸಬೇಕೆಂದು ನನಗೆ ತಿಳಿದಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಶಾಸಕರ ಭೇಟಿಯ ವೇಳೆ ಹಲವು ಮಂದಿ ಶಾಸಕರ ಬಳಿ ದೂರು ಹೇಳಿಕೊಂಡರು. ಕಡತವೊಂದರ ವಿಲೇ ಬಾಕಿ ಇರುವ ಬಗ್ಗೆ ತಿಳಿಸಿದಾಗ, ಈ ಕೆಲಸವನ್ನು ಮಾಡಿಕೊಡುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ನಿರ್ದೇಶಿಸಿದರು.
ತಹಶಿಲ್ದಾರ್ ಮದನ್‌ಮೋಹನ್ ಮಾತನಾಡಿ, ಜನ ಕಚೇರಿಗೆ ಬಂದರೆ ನಿಮಗೆ ತೊಂದರೆಯಾಗುವುದಾದರೆ ಪ್ರತಿ ದಿನ ಜನತೆಯ ಸಂದರ್ಶನಕ್ಕೆ ಸಮಯ ನಿಗಧಿಪಡಿಸೋಣ.
ಪ್ರತಿದಿನ 10 ಗಂಟೆಯ ನಂತರ ಹಾಜರಾತಿ ಪುಸ್ತಕವನ್ನು ನನ್ನ ಛೇಂಬರ್‌ಗೆ ತಂದು ತೋರಿಸಬೇಕು ಎಂದು ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.