ವನ್ಯಜೀವಿ ಚರ್ಮ, ಕೊಂಬುಗಳ ಮಾರಾಟ ಯತ್ನ: ಕಕ್ಕಿಂಜೆ ಶಾಲಾ ಮುಖ್ಯ ಶಿಕ್ಷಕ ಸಹಿತ ಒಟ್ಟು ಐವರ ಬಂಧನ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ವನಜೀವಿಗಳ ಚರ್ಮ, ಕೊಂಬುಗಳನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆಹಚ್ಚಿದ ತರೀಕೆರೆ ತಾಲೂಕು ಲಕ್ಕವಳ್ಳಿ ಭದ್ರಾ ವನ್ಯಜೀವಿ ಅರಣ್ಯ ವಿಭಾಗದ ಅಧಿಕಾರಿಗಳು ಬೆಳ್ತಂಗಡಿ ತಾಲೂಕಿನ ಮೂವರ ಸಹಿತ ಒಟ್ಟು 5 ಮಂದಿಯನ್ನು ಜು. 8 ರಂದು ಬಂಧಿಸಿದ್ದಾರೆ.
ಬಂಧಿತರಿಂದ ವನ್ಯಜೀವಿಗಳಾದ ಚಿರತೆ ಚರ್ಮ, ಜಿಂಕೆ ಕೊಂಬುಗಳು, ಸಾರಂಗದ ಕೊಂಬು, ಕಾಡುಕೋಣದ ಕೊಂಬುಗಳುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಮಾರುತಿ ಆಲ್ಟೋ ಕಾರು, ಬೈಕ್, ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಕಕ್ಕಿಂಜೆ ಬಳಿ ಇರುವ ಅಣಿಯೂರು ಸರಕಾರಿ ಶಾಲಾ ಮುಖ್ಯಶಿಕ್ಷಕ, ತರೀಕೆರೆ ಹೊಸಳ್ಳಿ ತಾಂಡಾ ನಿವಾಸಿಗಳಾದ ಮಂಜಾ ನಾಯ್ಕ(40.ವ), ನಿಂಗಾ ನಾಯ್ಕ(41ವ.), ಕುಮಾರ ನಾಯ್ಕ(45 ವ.), ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಬೆಂಜಾಲ್ ನಿವಾಸಿ ಅಝೀಝ್ ಬೆಂಜಾಲ್ (38 ವ.) ಮತ್ತು ಕಕ್ಕಿಂಜೆ ನಿವಾಸಿ ಅಹಮದ್‌ಕುಂಞಿ ಯಾನೆ ಕುಟ್ಟ ಅರೆಕ್ಕಲ್(27 ವ.) ಎಂಬವರೆಂದು ಗುರುತಿಸಲಾಗಿದೆ.
ಘಟನೆಗಿಂತ ಕೆಲದಿನಗಳ ಹಿಂದೆಯಷ್ಟೇ ವನ್ಯಮೃಗಗಳ ಕೊಂಬು, ಚರ್ಮ, ದಂತ, ಚಿಪ್ಪುಹಂದಿಯ ಚಿಪ್ಪು ಇತ್ಯಾಧಿ ಮಾರಾಟ ಮಾಡಲೆತ್ನಿಸಿದ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದ ಅರಣ್ಯಾಧಿಕಾರಿಗಳು ಅದರ ಮುಂದುವರಿದ ಭಾಗವಾಗಿ ಹಾಗೂ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಕೈಗೊಂಡಿದ್ದರು. ತರೀಕೆರೆ, ಚಿಕ್ಕಮಗಳೂರು ಭಾಗದ ಅರಣ್ಯದಲ್ಲಿ ಅವ್ಯಾಹತವಾಗಿ ವನ್ಯಜೀವಿಗಳ ಬೇಟೆ, ಮಾಂಸ ಮಾರಾಟ, ಅವುಗಳ ಚರ್ಮ, ಕೊಂಬು, ಉಗುರುಗಳ ಮಾರಾಟ ಜಾಲ ಕೇರಳಕ್ಕ ಸಂಪರ್ಕವಿಟ್ಟುಕೊಂಡು ಕಾರ್ಯಾಚರಿಸುತ್ತಿದೆ ಎಂದು ಖಚಿತಪಡಿಸಿಕೊಂಡು
ಪ್ರಥಮ ಹಂತದಲ್ಲಿ ಮಂಜಾ ನಾಯ್ಕ, ನಿಂಗಾ ನಾಯ್ಕ ಮತ್ತು ಕುಮಾರ ನಾಯ್ಕ ಅವರನ್ನು ಪ್ರಕರಣದಲ್ಲಿ ಬಂಧಿಸಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾದರೆ ಇನ್ನೊಂದು ಹಂತದಲ್ಲಿ ಅಬ್ದುಲ್ ಅಝೀಝ್ ಮತ್ತು ಅಹಮದ್‌ಕುಂಞಿ ಯಾನೆ ಕುಟ್ಟ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಒಂದು ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇವರ ಅಕ್ರಮ ಸೊತ್ತುಗಳ ಖರೀದಿದಾರ ಗಿರಾಕಿಗಳಂತೆ ಉಪಾಯ ಹೆಣೆದು ಎಲ್ಲಾ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಆರೋಪಿಗಳ ಪೈಕಿ ಮಂಜಾ ನಾಯ್ಕ ಅವರು ಕಕ್ಕಿಂಜೆ ಸರಕಾರಿ ಶಾಲಾ ಮುಖ್ಯ ಶಿಕ್ಷಕರಾಗಿದ್ದಾರೆ. ಇವರೆಲ್ಲಾ ಹೆಚ್ಚಿನ ಹಣ ಸಂಪಾದನೆಯ ಉದ್ಧೇಶದಿಂದ ಈ ಕೃತ್ಯವೆಸಗಿರುವುದಾಗಿ ತನಿಖೆಯ ವೇಳೆ ಬಹಿರಂಗವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.