ಕಾಶಿಪಟ್ನ: ಕಾಲುವೆಯ ದಂಡೆ ಒಡೆದು 25 ಎಕರೆ ಕ್ರಷಿ ನಾಶ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮದ ಕಿರೋಡಿ ಕರಂಗಲ್ ಕಾಲುವೆಯ ದಂಡೆ ಒಡದು ಕ್ರಷಿ ಭೂಮಿಗೆ ನೀರು ನುಗ್ಗಿ ಸುಮಾರು 25 ಎಕ್ರೆ ಭತ್ತದ ಕ್ರಷಿ ನಾಶಗೊಂಡಿದೆ.
ಭತ್ತದ ಕ್ರಷಿಯನ್ನೆ ನಂಬಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ 15 ಕುಟುಂಬಗಳು ಜೀವನ ಸಾಗಿಸುತ್ತಿದ್ದು ಈ ಬಾರಿ ಕೆಲವು ಕುಟುಂಬಗಳು ವಾರದ ಹಿಂದೆ ಮಳೆ ಕಡಿಮೆಯಾಗಿದೆ ಎಂದು ಉಲುಮೆ ಮಾಡಿ ನಾಟಿಯನ್ನು ಮಾಡಿದ್ದರು. ಎರಡು ದಿನಗಳ ಹಿಂದೆ ದಂಡೆ ಒಡೆದು ನೀರು ಹಾಗೂ ಮರಳು ಮಿಶ್ರಿತ ಮಣ್ಣು ನುಗ್ಗಿ ಭತ್ತದ ಬೆಳೆ ನಾಶವಾಗಿದ್ದು, ಇನ್ನು ಮುಂದಕ್ಕೆ ಯಾವುದೆ ಕೃಷಿ ಮಾಡದ ಪರಿಸ್ಥಿತಿ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮ ಕರಣಿಕರು, ಕಂದಾಯ ಅಧಿಕಾರಿಗಳು, ಕ್ರಷಿ ಇಲಾಖೆಗೂ, ತಹಶೀಲ್ದಾರರಿಗೂ ದೂರು ನೀಡಿದರೂ, ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ ಎಂದು ಕೃಷಿಕರಾದ ವಸಂತ ಶೆಟ್ಟಿ, ಅರುಣ್, ಚಂದ್ರಹಾಸ, ರೈತರು SDPI ಸಮಿತಿ ಯೊಂದಿಗೆ ತಮ್ಮ ಅಳಲನ್ನು ತೋರಿಕೊಂಡಿದ್ದಾರೆ,
SDPI ಸಂಬಂದ ಪಟ್ಟ ಅದಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ನ್ಯಾಯ ಒದಗಿಸಿ ಕೊಡಿವುದಾಗಿ ಭರವಸೆಯನ್ನು ನೀಡಲಾಯಿತು. ಸಮಿತಿಯಲ್ಲಿ SDPI ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷರಾದ ನವಾಝ್ ಶರೀಪ್, ರಾಷ್ಟ್ರೀಯ ಕಾರ್ಯದರ್ಶಿ  ಅಲ್ಪೋನ್ಸ್ ಪ್ರಾಂಕೋ, ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ಬೆಳ್ತಂಗಡಿ, ರಾಘವೇಂದ್ರ ಆಚಾರ್ಯ, ರಿಯಾಝ್ ಪೂಂಜಲಕಟ್ಟೆ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.