ಎಸ್.ಡಿ.ಎಂ. ಕಾಲೇಜಿನ ವಿಜಯ ಬ್ಯಾಂಕ್ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರ

ಉಜಿರೆ: ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾರ್ಯಾಚರಿಸುತ್ತಿದ್ದ, ವಿಜಯಾಬ್ಯಾಂಕ್ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರ ಸಮಾರಂಭ ಮತ್ತು ಇ-ಲಾಬಿ ಉದ್ಘಾಟನೆ ಜು. 11 ರಂದು ನಡೆಯಿತು.
ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಭಾಗವಹಿಸಿ ಶುಭಹಾರೈಸಿದರು. ವಿಜಯಾ ಬ್ಯಾಂಕ್‌ನ ಕ್ಷೇತ್ರೀಯ ಕಾರ್ಯಾಲಯ ಮಂಗಳೂರಿನ ಡಿಜಿಎಂ ಶ್ರೀಧರ ಮೂರ್ತಿ ಸ್ವಾಗತಿಸಿ ಎಜಿಎಂ ರೆಂಗರಾಜು ವಂದಿಸಿದರು. ಧರ್ಮಸ್ಥಳ ಶಾಖೆಯ ವ್ಯವಸ್ಥಾಪಕ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ವಿಜಯಾ ಬ್ಯಾಂಕ್ ಎಸ್.ಡಿ.ಎಂ. ಕಾಲೇಜು ಶಾಖೆಯ ವ್ಯವಸ್ಥಾಪಕರಾದ ದಿನೇಶ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ, ವಿಜಯ ಬ್ಯಾಂಕ್ ಉಜಿರೆ ಶಾಖೆಯ ವ್ಯವಸ್ಥಾಪಕರಾದ ಚೆನ್ನವೀರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಜಿರೆಯ ಗಣ್ಯರು, ಉದ್ಯಮಿಗಳು, ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.