ಉಜಿರೆ: ಕಬಡ್ಡಿ ತೀರ್ಪುಗಾರರ ಪುನಶ್ಚೇತನ ಕಾರ್ಯಗಾರ.

ಉಜಿರೆ: ತೀರ್ಪುಗಾರರಿಗೆ ಪಂದ್ಯದ ನಿಯಮಾವಳಿಗಳ ಬಗ್ಗೆ ಪೂರ್ಣ ತಿಳುವಳಿಕೆ ಇರಬೇಕು. ಯಾವುದೇ ಸಂಶಯ, ಗೊಂದಲ ಇರಬಾರದು. ನಿಷ್ಪಕ್ಷಪಾತವಾಗಿ ಪಂದ್ಯಗಳಲ್ಲಿ ತೀರ್ಪ ನೀಡಬೇಕು ಎಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರ ಡಾ. ಶ್ರೀಧರ್ ಹೇಳಿದರು.
ಅವರು ಜು.8 ರಂದು ಉಜಿರೆಯಲ್ಲಿ ಬೆಂಗಳೂರಿನ ಅಮೆಚೂರ್ ಕಬಡ್ಡಿ ಸಂಸ್ಥೆ ಮತ್ತು ಕಬಡ್ಡಿ ತೀರ್ಪುಗಾರರ ಸಂಸ್ಥೆಯ ಆಶ್ರಯದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಬಡ್ಡಿಗೆ ಇಂದು ಉತ್ತಮ ಪ್ರೋತ್ಸಾಹ, ಬೆಂಬಲ ದೊರಕುತ್ತಿದ್ದು, ಅನೇಕ ನಿಯಮಾವಳಿಗಳು ಬದಲಾಗಿರುವುದರಿಂದ ತೀರ್ಪುಗಾರರಿಗೆ ಇಂತಹ ಕಾರ್ಯಾಗಾರ ಅಗತ್ಯ. ಕಾರ್ಯಾಗಾರದ ಸದುಪಯೋಗ ಪಡೆರಿ ಹಾಗೂ ಸಂಶಯ ನಿವಾರಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಮಂಗಳೂರಿನ ಪುರುಷೋತ್ತಮ ಪೂಜಾರಿ ಮಾತನಾಡಿ, ತೀರ್ಪುಗಾರರು ತಮಗೆ ಸಿಗುವ ಅವಕಾಶದ ಸದುಪಯೋಗ ಪಡೆದು ಅಂತಾರ್‍ಟ್ರಾಯ ಮಟ್ಟದ ತೀರ್ಪುಗಾರರಾಗಬೇಕು. ಪ್ರತಿ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆಯಾದರೂ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರ್‍ಟ್ರಾಯ ಕಬಡ್ಡಿ ಆಟಗಾರರಾದ ರತನ್, ಮಿಥಿನ್ ಕುಮಾರ್ ಮತ್ತು ವರುಣ್ ಶೆಟ್ಟಿ ಅವರನ್ನು ಸನ್ಮಾನಿಸಲಾತು.
ಕೃಷ್ಣಾನಂದ ರಾವ್ ಸ್ವಾಗತಿಸಿದರು. ಕೃಷ್ಣಪ್ಪ ಬಂಗೇರ ಧನ್ಯವಾದವಿತ್ತರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ 400 ಮಂದಿ ರಾಷ್ಟ್ರಮಟ್ಟದ ಕಬಡ್ಡಿ ತಿರ್ಪುಗಾರರು ಕಾರ್ಯಗಾರದಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.