ನಾವೂರು ಕುದುರೆಮುಖ ರಕ್ಷಿತಾರಣ್ಯದೊಳಗೆ ಗಿಡ ನೆಡುವ “ಹಸಿರು ಹೊದಿಕೆ” ಕಾರ್ಯಕ್ರಮ

ನಾವೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ತಾಲೂಕು ನಾವೂರಿನ ಕಾಸರವಳ್ಳಿ ಅರಣ್ಯದಲ್ಲಿ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಸುಮಾರು 318 ಗಿಡಗಳನ್ನು ನೆಡಲಾಯಿತು.
ವನಪಾಲಕ ರಾಜುರವರ ಮಾರ್ಗದರ್ಶನದಲ್ಲಿ 62 ಜನ ಪರಿಸರಾಸಕ್ತರು ಸೇರಿ ತಮ್ಮ ಸ್ವಇಚ್ಛೆಯಿಂದ ಅಡವಿಗೆ ಪೂರಕವಾಗಿ ಬೆಳೆಯಲಿರುವ ಗಿಡಗಳನ್ನು ನೆಟ್ಟು ಹಸಿರು ಹೊದಿಕೆ ಎಂಬ ಈ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಚಾರಣಿಗ ದಿನೇಶ್ ಹೊಳ್ಳ, ಅವಿನಾಶ್ ಅರಸಿನಮಕ್ಕಿ ಮೊದಲಾದವರು ತಂಡದಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.