ಬೆಳ್ತಂಗಡಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಲ್ಫೋನ್ಸ್ ಫ್ರಾಂಕೋ ರವರಿಗೆ ಅಭಿನಂದನಾ ಸಭೆಯು ಜು.9 ರಂದು ಜರುಗಿತು. ಕಾರ್ಯಕ್ರಮಕ್ಕಾಗಿ ಅವರು ಬೆಳ್ತಂಗಡಿಗೆ ಆಗಮಿಸುತ್ತಿರುವಂತೆ ಪಕ್ಷದ ಪದಾಧಿಕಾರಿಗಳು ಹಾರ ಹಾಕಿ ಸ್ವಾಗತಿಸಿ ತಾಲೂಕಿಗೆ ಬರಮಾಡಿಕೊಂಡರು.
ಪಕ್ಷದ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಪಿ.ಡಿ ಆಂಟನಿ, ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಅಶ್ರಫ್ ಕಟ್ಟೆ, ಹೈದರ್ ನೀರ್ಸಾಲ್, ನಿಸಾರ್ಗುರುವಾಯನಕೆರೆ, ಫಝಲ್ ರಹಿಮಾನ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.