ಉಜಿರೆಯಲ್ಲಿ “ಸಮಡೈನ್ ಫ್ಯಾಮಿಲಿ ರೆಸ್ಟೋರೆಂಟ್” ಉದ್ಘಾಟನೆ

ಉಜಿರೆ: ಕಳೆದ 25 ವರ್ಷಗಳಿಂದ ಹೊಟೇಲ್ ವ್ಯವಹಾರ ಕ್ಷೇತ್ರದಲ್ಲಿ ಅನುಭವ ಹೊಂದಿ ಶುಚಿ ಮತ್ತು ರುಚಿಕರವಾದ ಅಡುಗೆಯೊಂದಿಗೆ ಗ್ರಾಹಕರ ಮನಗೆದ್ದಿರುವ “ಹೊಟೇಲ್ ಸಮಡೈನ್ ಫ್ಯಾಮಿಲಿ ರೆಸ್ಟೋರೆಂಟ್” ಬೆಳ್ತಂಗಡಿ ಇದರ ಉಜಿರೆ ಶಾಖೆಯು ಇಲ್ಲಿನ ಮುಖ್ಯ ರಸ್ತೆಯ ಅರಫಾ ಕಾಂಪ್ಲೆಕ್ಸ್‌ನಲ್ಲಿ ಜು. 8 ರಂದು ಶುಭಾರಂಭಗೊಂಡಿತು.
ಸಯ್ಯಿದ್ ಝೈನುಲ್ ಆಬಿದೀನ್ ಜಮಲಯಲ್ಲೈಲಿ ತಂಙಳ್ ಕಾಜೂರು, ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ತಂಙಳ್ ಉಜಿರೆ, ಉಜಿರೆ ಹಳೆಪೇಟೆ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಬ್ಬಾಸ್ ಮದನಿ, ಮನ್‌ಶರ್ ಗೇರುಕಟ್ಟೆ ಮುದರ್ರಿಸ್ ಯೂಸುಫ್ ಅಮ್ಜದಿ ದುಆ ಆಶೀರ್ವಚನ ಮಾಡಿದರು.
ನೂತನ ಹೊಟೇಲನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಿದರು.
ಶಾಸಕ ಹರೀಶ್ ಪೂಂಜ ಬಳಿಕ ಬೇಟಿ ನೀಡಿ ಶುಭ ಕೋರಿದರು. ಉದ್ಘಾಟನೆ ನಿಮಿತ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕ ಪುಷ್ಪರಾಜ್ ಶೆಟ್ಟಿ ವಹಿಸಿದ್ದರು. ಉಜಿರೆ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡಿಸೋಜಾ, ಹೊಟೇಲ್ ಇರುವ ಕಟ್ಟಡ “ಅರಫಾ ಕಾಂಪ್ಲೆಕ್ಸ್” ಇದರ ಮಾಲಕ ಫಕ್ರುದ್ದೀನ್ ಹಾಜಿ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಮುಖ್ಯ ಅತಿಥಿಗಳಾಗಿದ್ದರು.
ಸಮಾರಂಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಉಜಿರೆ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಬಿ.ಎಮ್ ಅಬ್ದುಲ್ ಹಮೀದ್, ಸಮಾಜ ಸೇವಕ ಅಬ್ಬೋನು ಮದ್ದಡ್ಕ, ಚಂದನ್‌ಪ್ರಸಾದ್ ಕಾಮತ್, ಸುರೇಶ್ ಉಜಿರೆ, ಮೊದಲಾದ ಅನೇಕ ಗಣ್ಯರು ಭೇಟಿ ನೀಡಿ ಶುಭ ಕೋರಿದರು. ಹೊಟೇಲ್ ಮಾಲಿಕರಾದ ಅಬೂಬಕ್ಕರ್ ಸಮಡೈನ್ ಮತ್ತು ಅವರ ತಂದೆ ಹಮೀದ್ ಮಲೆಬೆಟ್ಟು ಅವರು ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.
ಸಾದಿಕ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿದರು. ನ್ಯಾಯವಾದಿ ಶರೀಫ್ ಅರೆಕ್ಕಲ್ ಕಕ್ಕಿಂಜೆ ವಂದಿಸಿದರು.
ನೂತನ ಹೊಟೇಲ್‌ನಲ್ಲಿ 50 ಆಸನಗಳಿದ್ದು ಎ.ಸಿ ಕ್ಯಾಬೀನ್ ಇದೆ. ಫ್ಯಾಮಿಲಿ ರೂಮ್ ವ್ಯವಸ್ಥೆ ಮಾಡಲಾಗಿದ್ದು ಪಾರ್ಕಿಂಗ್ ಸೌಲಭ್ಯವವನ್ನೂ ಹೊಂದಿದೆ. ಅನುಭವಿ ಪಾಕತಜ್ಞರು, ವಿಶಾಲವಾದ ಅಡುಗೆ ಮನೆ ಹೊಂದಿದೆ. ಹೊಟೇಲ್‌ನಲ್ಲಿ ನಾರ್ತ್ ಮತ್ತು ಸೌತ್ ಇಂಡಿಯನ್ ಮಾದರಿಯ ಅಡುಗೆ ಸ್ವಾಧ ಲಭ್ಯವಿದೆ.
ಕಾರ್ಯಕ್ರಮದಲ್ಲಿ ಇಲೆಕ್ಟಿಕಲ್ ಕೆಲಸ ಮಾಡಿದ ಗಣೇಶ್, ಗುತ್ತಿಗೆದಾರ ಮುಹಮ್ಮದ್ ಅಲಿ ಕಕ್ಕೈನ ಮತ್ತು ಮೇಲ್ಚಾವಣಿ ಕೆಲಸ ಮಾಡಿದ ರಾಘವೇಂದ್ರ ಅವರನ್ನು ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.