ಭಾರತದಲ್ಲಿ ಮರಳಿನಿಂದ ಸಿಲಿಕಾನ್ ಬೇರ್ಪಡಿಸುವ ತಂತ್ರಜ್ಞಾನದ ಅವಶ್ಯಕತೆ ಇದೆ: ಲಕ್ಷ್ಮೀ ಸಾಗರ್

ಉಜಿರೆ: ಭಾರತದಲ್ಲಿ ಮರಳಿನಿಂದ ಸಿಲಿಕಾನ್ ಬೇರ್ಪಡಿಸುವ ತಂತ್ರಜ್ಞಾನದ ಅವಶ್ಯಕತೆ ಇದೆ. ಇದನ್ನು ಸಾಧಿಸಿದಲ್ಲಿ ಸೆಮಿಕಂಡಕ್ಟರ್ ತಂತಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿರಬಹುದು. ಈ ಮೂಲಕ ಭಾರತದಲ್ಲಿ ಸುಲಭ ರೂಪದಲ್ಲಿ ಅರೆ ವಾಹಕಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತ ಪ್ರಗತಿಯನ್ನು ಸಾಧಿಸಬಹುದಾಗಿದೆ. ಈ ಕ್ಷೇತ್ರಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಎಂದು ಎಸ್.ಡಿ.ಎಂ ತಾಂತ್ರಿಕ ವಿದ್ಯಾಲಯದ ಭೌತಶಾಸ್ತ್ರ ಉಪನ್ಯಾಸಕರಾದ ಲಕ್ಷ್ಮೀ ಸಾಗರ್ ತಿಳಿಸಿದರು.
ಇವರು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಸಂಘ ಸ್ಪೆಕ್ಟ್ರಾ ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ವಿಭಾಗದ ಮುಖ್ಯಸ್ಥರಾದ ಪ್ರೊ| ಸತೀಶ್ಚಂದ್ರ ರವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಟಿ.ಎನ್ ಕೇಶವ ರವರು ವಹಿಸಿದ್ದರು. 2018-19 ನೇ ಸಾಲಿನ ಭೌತಶಾಸ್ತ್ರ ಸಂಘದ ಮೊದಲ ಭಿತ್ತಿ ಪತ್ರಿಕೆ ಹಾಗುಇ-ಮ್ಯಾಗಜೀನ್ ಮಾಸ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಸಂಘದ ನಾಯಕನಾದ ವಿಶ್ವಜಿತ್ 2018-19 ನೇ ಸಾಲಿನ ಸಂಘದ ಮುಂದಿನ ಯೋಜನೆಗಳನ್ನು ತಿಳಿಸಿದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀದೇವಿ, ಶ್ರೀದೇವಿ ಎನ್ , ವಂದನಾ ,ರಶ್ಮಿತಾ ಉಪಸ್ಥಿತರಿದ್ದರು. ಹವ್ಯಾಸ್ ನಿರೂಪಿಸಿ, ರೂಪ ಪ್ರಭು ಸ್ವಾಗತಿಸಿ, ನವೀನ್ ಕುಮಾರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.