ನೆತ್ತರ ಶಾಲಾಭಿವೃದ್ಧಿಗಾಗಿ ಊರವರಿಂದ ಮಾದರಿ ಶ್ರಮದಾನ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನೆತ್ತರ: ಮಚ್ಚಿನ ಗ್ರಾಮದ ಸರಕಾರಿ ಕಿ. ಪ್ರಾ. ಶಾಲೆ ನೆತ್ತರದಲ್ಲಿ ಭಾಗ್ಯಶ್ರೀ ಮಿತ್ರಮಂಡಳಿ ನೆತ್ತರ, ಶ್ರೀ ಕ್ಷೇತ್ರ ಧ.ಗ್ರಾ ಯೋಜನೆಯ ಸ್ವಸಹಾಯ ಸಂಘಗಳು ಮತ್ತು ಪ್ರಗತಿ ಬಂಧು ತಂಡಗಳು ನೆತ್ತರ, ನವೋದಯ ಸ್ವಸಹಾಯ ಸಂಘಗಳು ನೆತ್ತರ, ಶಾಲಾ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಮತ್ತು ವಿದ್ಯಾರ್ಥಿ ಪೋಷಕರು ಹಾಗೂ ಊರ ವಿದ್ಯಾಭಿಮಾನಿಗಳು, ಅಂಗನವಾಡಿ ಕೇಂದ್ರ ನೆತ್ತರ ಇವುಗಳ ಸಹಯೋಗದೊಂದಿಗೆ ಒಂದು ದಿನದ ಶ್ರಮದಾನವನ್ನು ನಡೆಸಲಾಯಿತು.
ಈ ಶ್ರಮದಾನದ ಮೂಲಕ ಶಾಲಾ ಜಮೀನಿನಲ್ಲಿದ್ದ ಕಳೆಗಳನ್ನು ಸ್ವಚ್ಛಗೊಳಿಸಲಾಯಿತು. ಜೊತೆಗೆ ತೆಂಗಿನ ಸಸಿ, ಮಾವು, ಗೇರು ಗಿಡಗಳು, ಬಾಳೆಗಿಡ, ಸಾಗುವನಿ ಗಿಡಗಳನ್ನು ನೆಡಲಾಯಿತು. ಮಾತ್ರವಲ್ಲದೇ ಶಾಲಾ ಬಿಸಿಯೂಟಕ್ಕೆ ಅನುಕೂಲವಾಗುವಂತೆ ತರಕಾರಿ ತೋಟದ ರಚನೆಯನ್ನು ಮಾಡಲಾಯಿತು.
ಈ ಶ್ರಮದಾನದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮನಾಥ ಪೂಜಾರಿ, ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ, ಸುಂದರ ನೆತ್ತರ, ಪ್ರವೀಣ್ ಕುಮಾರ್ ಮುಂಡಕಜೆ, ಮೋಹನ ದಾಸ್ ಶೆಟ್ಟಿ ನೆತ್ತರ, ನವೀನ್ ಕುಮಾರ್, ಸೇವಾ ಪ್ರತಿನಿಧಿ ಶೋಭಾ, ನೆತ್ತರ ಅಂಗನವಾಡಿ ಕಾರ್ಯಕರ್ತೆ ಗೀತಲತಾ, ಶಾಲಾ ಶಿಕ್ಷಕಿ ರೂಪಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಶಾಲಾಕ್ಷಿ ಶೆಟ್ಟಿ, ಶಾಲಾ ಪೋಷಕರು, ಊರ ವಿದ್ಯಾಭಿಮಾನಿಗಳು ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.