ಜು.8: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸಾರ್ವಜನಿಕ ಸಭೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಜಿಲ ಸೀಮೆಯ 1400 ವರ್ಷಗಳ ಇತಿಹಾಸವಿರುವ 4 ರಾಜ್ಯ ಗುತ್ತು 12 ಮಾಗಣಿಗಳಿಗೆ ಒಳಪಟ್ಟ ಒಟ್ಟು 29 ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಪ್ರಾರಂಭಿಸುವ ಸಲುವಾಗಿ ಮಾಗಣೆಯ ಹತ್ತು ಸಮಸ್ತರ ಸಾರ್ವಜನಿಕ ಸಭೆ ಜು.8 ರಂದು ದೇವಾಲಯದಲ್ಲಿ ಜರುಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜಯರಾಮ ಶೆಟ್ಟಿ ರವರು  ಜೂ.30 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
2014 ರಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ ದೊರೆತಿತ್ತು. ಕಾರಣಾಂತರಗಳಿಂದ ಕೆಲಸ ಕಾರ್ಯ ಸ್ಥಗಿತಗೊಂಡಿದೆ. ಇದೀಗ ಸೀಮೆಯ ಭಕ್ತಾದಿಗಳ ಅಪೇಕ್ಷೆಯಂತೆ ಕೆಲಸಗಳನ್ನು ಪ್ರಾರಂಭಿಸುವ ಸಲುವಾಗಿ ಈ ಸಭೆ ನಡೆಯಲಿದೆ. ಈಗಾಗಲೇ ಶೇ.50 ಕಾಮಗಾರಿ ಪ್ರಗತಿಯಲ್ಲಿದ್ದು, ಸುಮಾರು 12 ಕೋಟಿ ವೆಚ್ಚದಲ್ಲಿ ಜೀರ್ಣೊದ್ಧಾರಗೊಳ್ಳಲಿದೆ. ಇದರ ಅಂಗವಾಗಿ 32  ಗ್ರಾಮದ ಭಕ್ತಾದಿಗಳು ಸಹಕಾರ ನೀಡಬೇಕಾಗಿದೆ ಎಂದರು. ಸೀಮೆಯ ಅರಸರಾದ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ್ ಅರಸರು ಸಂದೇಶ ನೀಡುತ್ತಾ, ಊರಿನ ಗಣ್ಯರುಗಳನ್ನು ಜನಪ್ರತಿನಿಧಿಗಳನ್ನು ಕೂಡಿಸಿಕೊಂಡು ಶೀಘ್ರವಾಗಿ ಶಿಲಾಮಯ ದೇವಸ್ಥಾನದ ನಿರ್ಮಾಣಕ್ಕೆ ಹೊರಟಿದ್ದೇವೆ. ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಜಿಲ ಸೀಮೆಯ ಪ್ರತಿನಿಧಿ ಶಿವಪ್ರಸಾದ್ ಅಜಿಲರು, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶಶಿಧರ ಶೆಟ್ಟಿ ನಾರಡ್ಕ ಗುತ್ತು, ಸತೀಶ್ ಹೆಗ್ಡೆ, ಶ್ರೀಮತಿ ಶಿವ ಪ್ರಭಾ, ದೇವಸ್ಥಾನದ ಸಿಬ್ಬಂದಿ ಕೊರಗಪ್ಪ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.