ವಿದ್ಯುತ್ ವಯರ್ ಮೇಲೆ ಬೀಳಲಿದೆ ಮರ: ಪಡಂಗಡಿ ಬಳಿ ಅಪಾಯದಲ್ಲಿ ವಿದ್ಯುತ್ ಲೈನ್

Advt_NewsUnder_1
Advt_NewsUnder_1

ಪಡಂಗಡಿ: ಗುರುವಾಯನಕೆರೆ 4 ಕಿ. ಮೀ ದೂರದ ಪಡಂಗಡಿ ಸನಿಹದ ಮೂಜುಲ್ನಾಯ ಬೆಟ್ಟದ ಬಳಿ ಹಸಿರು ಮರವೊಂದು ವಿದ್ಯುತ್ ಕಂಬ ಮತ್ತು ವಯರ್ ಮೇಲೆ ಬೀಳಲು ಸಿದ್ಧತೆ ನಡೆಸಿಕೊಂಡಿದೆ. ಗಾಳಿ ಬಂದರೆ ಜೋರಾಗಿ ವಾಲುತ್ತಿರುವ ಮರ ಮುರಿದು ಬಿದ್ದರೆ ಭಾರೀ ಅಪಾಯ ಕಾದಿದೆ.
ಈ ಬಗ್ಗೆ ಸ್ಥಳೀಯ ನಿವಾಸಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ಪಡಂಗಡಿ ಅವರು ಚಿತ್ರ ಸಹಿತ ವಿಚಾರವನ್ನು “ಸುದ್ದಿ” ಪತ್ರಿಕೆಯ ಗಮನಕ್ಕೆ ತಂದಿದ್ದಾರೆ. ಅವರೇ ಆರೋಪಿಸುವಂತೆ ಸದ್ರಿ ವಿಚಾರದ ಬಗ್ಗೆ ಅವರು ಈಗಾಗಲೇ ಮೆಸ್ಕಾಂ ಇಲಾಖೆಯ ಬೆಳ್ತಂಗಡಿ ಕಚೇರಿಗೆ ಮಾಹಿತಿ ನೀಡಿದರೆ ಮಡಂತ್ಯಾರು ಕಚೇರಿಗೆ ತಿಳುಸುವಂತೆ ಹೇಳಿದ್ದರಂತೆ. ಅಂತೆಯೇ ಅಲ್ಲಿಗೆ ಹೋಗಿ ತಿಳಿಸಿದರೆ ಬೆಳ್ತಂಗಡಿಗೆ ಹೇಳಿ ಎಂದರಂತೆ. ಆದ್ದರಿಂದ ಇಲಾಖೆಯ ಕಚೇರಿಗಳು ಇಂತಹಾ ದೂರುಗಳನ್ನು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ನಿಲುವು ಬಿಟ್ಟು ಸಂವಹನ ಮೂಲಕ ಸಂಬಂಧಪಟ್ಟವರಿಗೆ ತಿಳಿಸಿ ಸಮಸ್ಯೆ ಪರಿಹಾರ ಮತ್ತು ಅದರಿಂದ ಆಗಬಹುದಾದ ಸಂಭಾವ್ಯ ಅಪಾಯ ತಪ್ಪಿಸಬೇಕಾಗಿರುವುದು ಅವರ ಜವಾಬ್ಧಾರಿ ಎಂದು ಅವರು ಬಹಳ ಬೇಸರಿಂದ ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.