ಮಲೇಷ್ಯಾದಲ್ಲಿ ಉಜಿರೆ ತಂಡದ ನೃತ್ಯ-ಸಂಗೀತ ಸಂಭ್ರಮ.

ಉಜಿರೆ: ಉಜಿರೆ ಶ್ರೀ ವಾಣಿ ನೃತ್ಯ ಕಲಾ ಕೇಂದ್ರದ ನೃತ್ಯ ಶಿಕ್ಷಕಿ ಶ್ರೀಮತಿ ಶಾಂತಾ ಪಡ್ವೆಟ್ನಾಯರು ತಮ್ಮ ಶಿಷ್ಯವೃಂದದವರೊಂದಿಗೆ ಮಲೇಷ್ಯಾದ ಮಿಡ್‌ಲ್ಯಾಂಡ್‌ನ ಶ್ರೀ ಮಹಾ ಮಾರಿಯಮ್ಮನ್ ದೇವಸ್ಥಾನದ ತಿರುವಿಲ್ಲಾ ಸಮಾರಂಭದ ಜಾತ್ರೋ ತ್ಸವದಲ್ಲಿ ಜೂ. 8 ರಂದು ಸುಮಾರು ಒಂದು ಗಂಟೆಗಳ ಕಾಲ ನೃತ್ಯ-ಸಂಗೀತ ಕಾರ್ಯಕ್ರಮದ ಮೂಲಕ ಭಾರತೀಯ ಸಾಂಸ್ಕೃತಿಕ ಕಲಾವೈಭವ ಅನಾವರಣಗೊಳಿಸಿ ಶ್ರೋತೃಗಳ ಮನ ತಣಿಸಿದರು.

ಕಾರ್ಯಕ್ರಮದಲ್ಲಿ ಉಜಿರೆಯ ಯುವ ಪ್ರತಿಭೆ ರಜತ ಮಯ್ಯ ಭಕ್ತಿ-ಭಾವ-ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರೆ, ಶ್ರೀ ವಾಣಿ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನದ ಮೂಲಕ ಕಲಾಭಿಮಾನಿಗಳನ್ನು ರಂಜಿಸಿದರು. ತಂಡದಲ್ಲಿ ಶಾಂತಾ ಪಡ್ವೆಟ್ನಾಯರ ಪುತ್ರಿ ವಿಂದ್ಯಲಕ್ಷ್ಮೀಶ್, ಸೊಸೆ ಸೌಜನ್ಯ ಪಡ್ವೆಟ್ನಾಯ, ಮೊಮ್ಮಗಳು ಬೇಬಿ ತನ್ವಿ, ಶಿಷ್ಯೆಯರಾದ ಪ್ರತೀಕ್ಷಾ ಗುರುರಾಜ್, ಸಮೃದ್ಧಿ ಜೈನ್, ಸುಮನ ಭಟ್, ದಿಶಾರಾಘ್, ದೀನ ಮಂಜು, ವಿಸ್ಮಿತ ಮತ್ತಿತರರು ಇದ್ದರು. ದೇವಸ್ಥಾನದ ವ್ಯವಸ್ಥಾಪಕ ತಾರಾನಾಥ್ ಅವರ ವಿಶೇಷ ಆಮಂತ್ರಣದ ಮೇರೆಗೆ ಶ್ರೀಮತಿ ಶಾಂತಾ ಪಡ್ವೆಟ್ನಾಯರು ತಮ್ಮ ತಂಡದೊಂದಿಗೆ ಮಲೇಷ್ಯಾದಲ್ಲಿ ನೃತ್ಯ ಕಾರ್ಯಕ್ರಮ ನೀಡಲು ತಮ್ಮ ತಂಡವನ್ನು ಕರೆದೊಯ್ದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.