ಗ್ರಾ.ಪಂ.ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ಜಯಭೇರಿ.

Advt_NewsUnder_1
Advt_NewsUnder_1

ಅಂಡಿಂಜೆ: ಗ್ರಾಮ ಪಂಚಾಯತ್ ನ ಅಂಡಿಂಜೆ 2 ನೇ ವಾರ್ಡ್ ನ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಜೂ.14 ರಂದು  ಉಪ ಚುನಾವಣೆಯು ನಡೆದಿದ್ದು, ಜೂ.17 ರಂದು  ಚುನಾವಣಾ ಫಲಿತಾಂಶ ಪ್ರಕಟವಾಗಿದೆ.

 ಉಪಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಆಶಾ ಸುಂದರ ಪೂಜಾರಿಯವರು ವಿಜಯಶಾಲಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಜೂ.17 ರಂದು ಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು ಚಲಾವಣೆಯಾದ 668 ಮತಗಳಲ್ಲಿ, ಕಾಂಗ್ರೆಸ್ ಹಾಗೂ ಸಿಪಿಐ (ಎಂ) ಬೆಂಬಲಿತ ಅಭ್ಯರ್ಥಿ ಶ್ರೀಮತಿ ಜಯಂತಿ – 228 ಮತಗಳನ್ನು ಪಡೆದಿದ್ದು,  ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಆಶಾ ಸುಂದರ ಪೂಜಾರಿ ರವರು 429 ಮತಗಳನ್ನು ಪಡೆದು  201 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.